ಭಾರತದ ಮಾರುಕಟ್ಟೆಯಲ್ಲಿ ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ Gold price fall
ಹೊಸದಿಲ್ಲಿ, ಅಕ್ಟೋಬರ್20: ಚಿನ್ನ- ಬೆಳ್ಳಿ ದರ ಇಂದು ಭಾರತದ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ. ಜಾಗತಿಕ ಮಟ್ಟದ ಬೆಲೆಯನ್ನು ಅನುಸರಿಸಿ, ಭಾರತದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತ ದಾಖಲಿಸಿದೆ. Gold price fall

ಚಿನ್ನದ ದರದಲ್ಲಿ 0.2% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,584 ರೂಪಾಯಿ ಆಗಿದೆ. ಬೆಳ್ಳಿ ದರವು 0.35% ಇಳಿಕೆ ಕಂಡು, 61,882 ರೂಪಾಯಿಯಲ್ಲಿ ವಹಿವಾಟು ನಡೆಸಿದೆ.
ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರವು 0.24% ಮತ್ತು ಬೆಳ್ಳಿಯು 0.6% ಏರಿಕೆ ದಾಖಲಿಸಿತ್ತು.
ರೋಗನಿರೋಧಕ ಶಕ್ತಿಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಐಡಿ ಬಳಕೆ – ಪಿಎಂ ಮೋದಿ
ಯುಎಸ್ ಡಾಲರ್ ಮೌಲ್ಯ ಸ್ಥಿರವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ದರದ ಬೆಲೆಯು ಇಳಿಕೆ ಕಂಡಿದೆ. ಸ್ಪಾಟ್ ಗೋಲ್ಡ್ 0.1% ಕುಸಿದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1903.16 ವ್ಯವಹಾರ ನಡೆಸಿದೆ.

ಯುಎಸ್ ಡಾಲರ್ ಮೌಲ್ಯದಲ್ಲಿ ಚೇತರಿಕೆ, ಯುಎಸ್ ಆರ್ಥಿಕ ಉತ್ತೇಜನ ಮಾತುಕತೆಯಲ್ಲಿನ ಭರವಸೆ ಹಿನ್ನೆಲೆಯಲ್ಲಿ ಚಿನ್ನದ ನಷ್ಟಕ್ಕೆ ಮಿತಿ ಬಿದ್ದಿದೆ. ಬೆಳ್ಳಿ ದರವು 0.3% ಕುಸಿದು, ಪ್ರತಿ ಔನ್ಸ್ ಗೆ $ 24.43 ಆಗಿದ್ದರೆ, ಪ್ಲಾಟಿನಂ ಮತ್ತು ಪಲಾಡಿಯಂ 0.1% ಏರಿಕೆ ಕಂಡು, $ 856.85ರಲ್ಲಿ ವಹಿವಾಟು ನಡೆಸುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








