ಕೊರೊನಾ ಆತಂಕದ ನಂತರ ಲಾಕ್ ಡೌನ್ ನಿಂದಾಗಿ ಅನೇಕ ಉದ್ಯಮಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಆದರೆ ಇದರ ಹೊರೆ ಗ್ರಾಹಕರ ಮೇಲೆ ಬೀಳುವಂತಾಗಿದೆ. ಇದಕ್ಕೆ ಉದಾಹರಣೆ ಅಂದರೆ ದಿನೇ ದಿನೇ ಚಿನ್ನದ ದರ ಗಣನೀಯವಾಗಿ ಏರಿಕೆಯಾಗುತ್ತಿರುವುದು. ಹೌದು ಲಾಕ್ ಡೌನ್ ನಂತರದಿಂದಲೂ ದಿನೇ ದಿನೇ ಚಿನ್ನದ ದರದಲ್ಲಿ ಏರಿಕೆಯಾಗುತ್ತಲೇ ಇದ್ದು, ಇಂದೂ ಸಹ ಮತ್ತೆ ಬಂಗಾರದ ಬೆಲೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 50,900 ಇದೆ. ಅಂದ್ರೆ ಇಂದು ಬರೋಬ್ಬರಿ 140 ರೂಪಾಯಿ ಏರಿಕೆ ಕಂಡಿದೆ. ಇನ್ನೂ 10 ಗ್ರಾಂ ಶುದ್ಧ ಚಿನ್ನಕ್ಕೆ 55,530 ರೂಪಾಯಿ ಆಗಿದೆ. ಅಂದ್ರೆ ಒಂದೇ ದಿನ 160 ರೂಪಾಯಿ ಏರಿಕೆ ಕಂಡಿದೆ. ಆದ್ರೆ ಬೆಳ್ಳಿಯ ದರದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 65,050 ರೂಪಾಯಿ ಆಗಿದೆ. ಇನ್ನೂ ಮುಂಬರುವ ದಿನಗಳಲ್ಲಿ ಚಿನ್ನದ ದರ ಗಗನ್ನೇರಲಿದ್ದು, ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.