ಬೆಂಗಳೂರು : ದೇಶಕ್ಕೆ ಕೊರೊನಾ ಎಂಟ್ರಿ ಕೊಟ್ಟಿದ್ದೇ ಕೊಟ್ಟದ್ದು. ಎಲ್ಲರ ಜೀವನವೂ ಉಲ್ಟಾ ಆಗ್ಬಿಡ್ತು. ಅದರಲ್ಲೂ ಮದ್ಯಪ್ರಿಯರಿಗೆ ಕೊರೊನಾ ಲಾಕ್ ಡೌನ್ ನರಕದಂತೆ ಕಾಣುತ್ತಿದೆ. ಲಾಕ್ ಡೌನ್ ನಂತ್ರ, ಮದ್ಯ ಸಿಗದೇ ಅನೇಕ ಮದ್ಯಪ್ರಿಯರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕೊರೊನಾ ಸಾವಿಗಿಂತ ರಾಜ್ಯದಲ್ಲಿ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 15ರ ನಂತ್ರ ರಾಜ್ಯದಲ್ಲಿ ಮದ್ಯದ ಅಂಗಡಿಯನ್ನು ಓಪನ್ ಮಾಡಲು ನಿರ್ಧರಿಸಿದೆಯಂತೆ.
ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಅಬಕಾರಿ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಏಪ್ರಿಲ್ 15ರಿಂದ ರಾಜ್ಯದಲ್ಲಿನ ಎಂಎಸ್‌ಐಎಲ್ ಅಂಗಡಿಗಳನ್ನು ಓಪನ್ ಮಾಡುವ ಮೂಲಕ, ಮದ್ಯ ವಿತರಿಸಲು ಅನುಕೂಲ ಮಾಡಿಕೊಡುವಂತ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಈ ಪ್ರಸ್ತಾವನೆಗೆ ಸಿಎಂ ಓಕೆ ಅಂದ್ರೇ ಏಪ್ರಿಲ್ 15ರಿಂದ ರಾಜ್ಯದಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿ ಓಪನ್ ಆಗಲಿದೆ.
ಆದ್ರೇ.. ಸರ್ಕಾರ ಇಲ್ಲಿ ಪಾರ್ಸಲ್ ಗೆ ಮಾತ್ರವೇ ಅವಕಾಶ ನೀಡಲಿದೆ. ಇದರ ಹೊರತಾಗಿ ಬಾರ್ ಗೆ ಅನುಮತಿ ನೀಡೋದು ಡೌಟ್ ಆಗಿದೆ. ಇದೆಲ್ಲವೂ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರದ ಮೇಲಿದೆ