ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಸಂಚಾರವನ್ನು ಒದಗಿಸುತ್ತಿದೆ. ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ತಡರಾತ್ರಿ 2:00 ಗಂಟೆಯವರೆಗೆ ಈ ಹೆಚ್ಚುವರಿ ಬಸ್ ಸೇವೆ ಲಭ್ಯವಿರುತ್ತದೆ.
ಹೆಚ್ಚುವರಿ ಬಸ್ ಮಾರ್ಗಗಳು:
– G-3: ಬ್ರಿಗೇಡ್ ರಸ್ತೆ – ಎಲೆಕ್ಟ್ರಾನಿಕ್ಸ್ ಸಿಟಿ
– G-4: ಬ್ರಿಗೇಡ್ ರಸ್ತೆ – ಜಿಗಣಿ
– G-2: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಸರ್ಜಾಪುರ
– G-6: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್ಸ್
– G-7: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಜನಪ್ರಿಯ ಟೌನ್ ಶಿಪ್
– G-8: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ನೆಲಮಂಗಲ
– G-9: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಯಲಹಂಕ ಉಪನಗರ 5ನೇ ಹಂತ
– G-10: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಯಲಹಂಕ
– G-11: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಬಾಗಲೂರು
– 317-G: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಹೊಸಕೋಟೆ
– SBS-13K: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಚನ್ನಸಂದ್ರ
– SBS-1K: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಕಾಡುಗೋಡಿ
– 13: ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ – ಬನಶಂಕರಿ
ಪ್ರಮುಖ ಬಸ್ ನಿಲ್ದಾಣಗಳು:
– ಕೆಂಪೇಗೌಡ ಬಸ್ ನಿಲ್ದಾಣ
– ಕೃಷ್ಣರಾಜ ಮಾರುಕಟ್ಟೆ
– ಶಿವಾಜಿನಗರ
– ಕೋರಮಂಗಲ
– ಕಾಡುಗೋಡಿ
– ಕೆಂಗೇರಿ
– ಸುಮನಹಳ್ಳಿ
– ಗೊರಗುಂಟೆಪಾಳ್ಯ
– ಯಶವಂತಪುರ
– ಯಲಹಂಕ
– ಶಾಂತಿನಗರ
– ಬನಶಂಕರಿ
– ಹೆಬ್ಬಾಳ
– ಸೆಂಟ್ರಲ್ ಸಿಲ್ಕ್ ಬೋರ್ಡ್
ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರವನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.