2021 ವರ್ಷದ ಪ್ರಾರಂಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ – ತುಟ್ಟಿ ಭತ್ಯೆ ಏರಿಕೆ
ಹೊಸದಿಲ್ಲಿ, ಜನವರಿ06: ಹೊಸ ವರ್ಷವು ಕೇಂದ್ರ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿಯೊಂದಿಗೆ ಪ್ರಾರಂಭವಾಗಿದೆ. ಜನವರಿಯಿಂದಲೇ ಕೇಂದ್ರ ಸರ್ಕಾರೀ ನೌಕರರು ತುಟ್ಟಿ ಭತ್ಯೆಯಲ್ಲಿ 4 ಪ್ರತಿಶತದಷ್ಟು ಹೆಚ್ಚಳ ಪಡೆಯಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಅಷ್ಟೇ ಅಲ್ಲ ಸರ್ಕಾರಿ ನೌಕರರು ತಮ್ಮ ದೀರ್ಘಾವಧಿಯ ಬಾಕಿ ಹಣವನ್ನು ಪಡೆಯಲು ಜೂನ್ ವರೆಗೆ ಕಾಯಬೇಕಾಗಿಲ್ಲ.
ತುಟ್ಟಿ ಭತ್ಯೆಯ ಹೆಚ್ಚಳವು ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧಾರದ ಮೇಲೆ ಸರ್ಕಾರ ನಿರ್ಧಾರ ಮಾಡಿದೆ.
ಇದಕ್ಕೂ ಮುನ್ನ, 2020 ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಡಿಎ ಹೆಚ್ಚುವರಿ ಕಂತು ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು.
ಇದಲ್ಲದೆ, 2020 ರ ಜನವರಿಯಿಂದ ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು (ಡಿಆರ್) ಬಿಡುಗಡೆ ಮಾಡಿದೆ.
ಸೆಂಟ್ರಲ್ ವಿಸ್ಟಾ ಯೋಜನೆಯ ಪುನರಾಭಿವೃದ್ಧಿ ಯೋಜನೆಗೆ ಸುಪ್ರೀಂ ಕೋರ್ಟ್ ಅಸ್ತು
ಹಣಕಾಸು ಸಚಿವಾಲಯದ ಪ್ರಕಾರ, ಬೆಲೆ ಏರಿಕೆಯನ್ನು ಸರಿದೂಗಿಸಲು, ಪ್ರಸ್ತುತ ವೇತನ / ಪಿಂಚಣಿಯ 17 ಪ್ರತಿಶತ ದರಕ್ಕಿಂತ 4 ಪ್ರತಿಶತದಷ್ಟು ಹೆಚ್ಚಳವಾಗಲಿದೆ.
ಇದರಿಂದ ವರ್ಷಕ್ಕೆ 12,510.04 ಕೋಟಿ ರೂ. ಮತ್ತು 2020-21ರ ಹಣಕಾಸು ವರ್ಷದಲ್ಲಿ (ಜನವರಿ 2020 ರಿಂದ ಫೆಬ್ರವರಿ 2021 ರವರೆಗೆ 14 ತಿಂಗಳ ಅವಧಿಗೆ) 14,595.04 ಕೋಟಿ ರೂ. ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ಹೊರೆ ಬೀಳಲಿದೆ.
ಈ ಕ್ರಮದಿಂದ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65.26 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಅದರ ಜೊತೆಗೆ, ಕೇಂದ್ರ ಸರ್ಕಾರವು ಸೇವೆ ಸಲ್ಲಿಸುತ್ತಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರ ಅಂಗವೈಕಲ್ಯ ಪರಿಹಾರವನ್ನು ವಿಸ್ತರಿಸಿದೆ.
ಕರ್ತವ್ಯದ ಸಾಲಿನಲ್ಲಿ ಅಂಗವಿಕಲರಾಗುವ ಮತ್ತು ಅಂತಹ ಅಂಗವೈಕಲ್ಯದ ನಡುವೆಯೂ ಸೇವೆಯಲ್ಲಿ ಉಳಿಸಿಕೊಳ್ಳುವವರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಇದೇ ನಿಟ್ಟಿನಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಸರ್ಕಾರದ ಈ ಕ್ರಮವು ವಿಶೇಷವಾಗಿ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್ ಮುಂತಾದ ಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಗೆ ಭಾರಿ ಪರಿಹಾರ ನೀಡುತ್ತದೆ.
ಕರ್ತವ್ಯಗಳ ನಿರ್ವಹಣೆಯಲ್ಲಿರುವಾಗ ಏನಾದರೂ ಅಫಘಾತ ಸಂಭವಿಸಿ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ಅಂಗವೈಕಲ್ಯ ಪರಿಹಾರವನ್ನು ನೀಡಲು ಕಳೆದ ವಾರ ಮೋದಿ ಸರ್ಕಾರ ನಿರ್ಧರಿಸಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಜೇನುತುಪ್ಪದ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು ?https://t.co/8pna4hXZSC
— Saaksha TV (@SaakshaTv) January 5, 2021
ಚೀನಾದ ಅರ್ಥಿಕ ನೀತಿಗೆ ಪಾಕ್ ಪ್ರಧಾನಿ ಜೈಕಾರ – ಮತ್ತೆ ಚೀನಾದ ಹಣಕಾಸಿನ ನಿರೀಕ್ಷೆಯಲ್ಲಿ ಪಾಕ್https://t.co/9J9AZoB0XK
— Saaksha TV (@SaakshaTv) January 5, 2021