ವಾಹನ ಸವಾರರಿಗೆ ಗುಡ್ ನ್ಯೂಸ್ : ತೈಲ ಬೆಲೆ ಇಳಿಕೆ
ಮುಂಬೈ : ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಇದೀಗ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿವೆ.
ಇಂದು ತೈಲೆ ಬೆಲೆ ಪರಿಷ್ಕರಣೆ ಮಾಡಿರುವ ತೈಲ ಕಂಪನಿಗಳು ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆ ಮಾಡಿವೆ.
14 ಪೈಸೆ ಇಳಿಕೆ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‍ಗೆ 101.49 ರೂಪಾಯಿ ಹಾಗೂ ಡೀಸೆಲ್ ಲೀಟರ್‍ಗೆ 88.92 ರೂಪಾಯಿ ಆಗಿದೆ. \
ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 107.52 ರೂ.ಗೆ ಮಾರಾಟವಾಗುತ್ತಿದ್ದರೇ, ಡೀಸೆಲ್ ಬೆಲೆಯಲ್ಲಿ 16 ಪೈಸೆ ತಗ್ಗಿಸಲಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‍ಗೆ ಕ್ರಮವಾಗಿ 11 ಮತ್ತು 15 ಪೈಸೆ ಇಳಿಕೆ ಕಂಡಿವೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ 101.82 ರೂಪಾಯಿ ಹಾಗೂ ಡೀಸೆಲ್ 91.98 ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 105.13 ರೂಪಾಯಿ ಹಾಗೂ ಡೀಸೆಲ್ 94.49 ರೂಪಾಯಿಗೆ ಮಾರಾಟವಾಗುತ್ತಿದೆ.