ತಿರುವನಂತಪುರಂ: ಶಬರಿಮಲೆಗೆ ಸಾಂಪ್ರದಾಯಿಕ ಕಾಡು ದಾರಿಯಲ್ಲಿ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪಾದಯಾತ್ರಿಗಳಿಗೆ ವಿಶೇಷ ಟ್ಯಾಗ್‌ಗಳನ್ನು ನೀಡಲಾಗುವುದು ಮತ್ತು ಈ ಟ್ಯಾಗ್‌ಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನೀಡುವರು ಎಂದು ಅವರು ತಿಳಿಸಿದ್ದಾರೆ.ಈ ಹೊಸ ವ್ಯವಸ್ಥೆಯಿಂದ ಪಾದಯಾತ್ರಿಗಳು ಸುಲಭವಾಗಿ ಸ್ವಾಮಿಯ ದರ್ಶನ ಪಡೆಯಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...








