ಜನಪ್ರಿಯ ವೀಡಿಯೊ ಪ್ಲಾಟ್ಫಾರ್ಮ್ಗಳಲ್ಲಿ ಯೂಟ್ಯೂಬ್ ಕೂಡ ಒಂದು. ವೀಡಿಯೊ ಮತ್ತು ಮ್ಯೂಸಿಕ್ ಎರಡನ್ನೂ ಒಳಗೊಂಡಿರುವ ಯೂಟ್ಯೂಬ್ ಮನರಂಜನೆಗೆ ಹೇಳಿ ಮಾಡಿಸಿದ ತಾಣ. ಯೂಟ್ಯೂಬ್ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್ ಹಾಗೂ ಟೂಲ್ಗಳನ್ನು ಪರಿಚಯಿಸುತ್ತಿದೆ.
ಯುಟ್ಯೂಬ್ ಬಳಕೆದಾರರ ಅನುಕೂಲಕ್ಕಾಗಿ ಹೊಸ ಆಯ್ಕೆಯ ಫೀಚರ್ಸ್ಗಳನ್ನು ಪರಿಚಯಿಸುತ್ತಿದೆ. ಯೂಟ್ಯೂಬ್ ಹೊಸ ಅಪ್ಲಿಕೇಶನ್ ಮತ್ತು ಹೊಸ ಎಐ ಚಾಲಿತ ಫೀಚರ್ಸ್ಗಳನ್ನು ಘೋಷಣೆ ಮಾಡಿದೆ. ವೀಡಿಯೊ ಎಡಿಟ್ ಮಾಡುವುದಕ್ಕೆ ಅವಕಾಶ ನೀಡುವ ಯೂಟ್ಯೂಬ್ ಕ್ರಿಯೆಟ್ ಆ್ಯಪ್ ಪರಿಚಯಿಸಿದೆ. ಇದರೊಂದಿಗೆ ಡ್ರೀಮ್ ಸ್ಕ್ರೀನ್ ಫೀಚರ್ಸ್ ಅನ್ನು ಕೂಡ ಪರಿಚಯಿಸಿದೆ.
ಮೇಡ್ ಆನ್ ಯೂಟ್ಯೂಬ್ ಈವೆಂಟ್ನಲ್ಲಿ ಗೂಗಲ್ ಭರಪೂರ ಘೋಷಣೆ ಮಾಡಿದೆ. ಈ ಮೂಲಕ ಯೂಟ್ಯೂಬ್ ಹೊಸ ಕ್ರಾಂತಿ ಬರೆಯುವ ಸೂಚನೆ ನೀಡಿದೆ.
ವೀಡಿಯೊಗಳನ್ನು ಎಡಿಟ್ ಮಾಡುವುದಕ್ಕೆ ಬೇರೆ ಅಪ್ಲಿಕೇಶನ್ ಬಳಸುವ ಅವಶ್ಯಕತೆ ಬರುವುದಿಲ್ಲ. ಬದಲಿಗೆ ಯೂಟ್ಯೂಬ್ ಕ್ರಿಯೆಟ್ ಎನ್ನುವ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಯೂಟ್ಯೂಬ್ ಡ್ರೀಮ್ ಸ್ಕ್ರೀನ್ ಎನ್ನುವ ಫೀಚರ್ಸ್ ಘೋಷಿಸಿದೆ. ಇದು ಶಾರ್ಟ್ಸ್ ಕ್ರಿಯೆಟರ್ಗಳಿಗೆ ಎಐ ಸಹಾಯದಿಂದ ವೀಡಿಯೊ ಬ್ಯಾಕ್ಗ್ರೌಂಡ್ಗಳನ್ನು ಕ್ರಿಯೆಟ್ ಮಾಡಲು ಸಹಾಯ ಮಾಡಲಿದೆ.