ಬಿಗ್ ಬಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಪೋಸ್ಟರ್ ಬಿಡುಗಡೆ
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರೋದು ಗೊತ್ತೆ ಇದೆ. ಸೌತ್ ಚಿತ್ರರಂಗದ ಜೊತೆ ಬಾಲಿವುಡ್ ನಲ್ಲೂ ಅವಕಾಶಗಳನ್ನ ಬಾಚಿಕೊಳ್ಳುತ್ತಿರುವ ರಶ್ಮಿಕಾ ಕೈಯಲ್ಲಿ ಹಲವು ಪ್ರಾಜಕ್ಟ್ ಗಳಿವೆ. ಅವುಗಳಲ್ಲಿ ಬಿಗ್ ಬಿ ಅಮಿತ್ ಬಚ್ಚನ್ ಜತೆ ನಟಿಸುತ್ತಿರುವ ಗುಡ್ ಬೈ ಸಿನಿಮಾ ಸಹ ಒಂದು.
ಹಿರಿಯ ನಟ ಅಮಿತಾಬ್ ಬಚ್ಚನ್ ಗುಡ್ ಬೈ ಚಿತ್ರದ ಮೊದಲ ಪೋಸ್ಟರ್ ಅನ್ನ ಹಂಚಿಕೊಳ್ಳುವ ಮೂಲಕ ಚಿತ್ರದ ಕ್ರೇಜ್ ಹೆಚ್ಚಿಸಿದ್ದಾರೆ. ಮೊದಲ ಭಾರಿಗೆ ರಶ್ಮಿಕಾ ಅಮಿತಾಬ್ ನಟಿಸುತ್ತಿರುವ ಚಿತ್ರ ಸೆಟ್ಟೇರಿದಾಗಿನಿಂದಲೂ ಕುತೂಹಲ ಹೆಚ್ಚಿಸಿತ್ತು. ಅಪ್ಡೇಟ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಬಿ ಪೋಸ್ಟರ್ ಮೂಲಕ ಖುಷಿ ನೀಡಿದ್ದಾರೆ.
ಚಿತ್ರದ ಪೋಸ್ಟರ್ ನಲ್ಲಿ ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಒಟ್ಟಿಗೆ ಗಾಳಿಪಟ ಹಾರಿಸುತ್ತಿರುವ ಪೋಸ್ಟರ್ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಬಿಗ್ ಬಿ ಮತ್ತು ರಶ್ಮಿಕಾ ಮಂದಣ್ಣ ಅವರಲ್ಲದೆ, ಚಿತ್ರದಲ್ಲಿ ನೀನಾ ಗುಪ್ತಾ, ಪಾವೈಲ್ ಗುಲಾಟಿ, ಎಲ್ಲಿ ಅವಿರಾಮ್, ಸುನಿಲ್ ಗ್ರೋವರ್ ಮತ್ತು ಸಾಹಿಲ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಗುಡ್ ಬೈ’ ಚಿತ್ರವನ್ನ ವಿಕಾಸ್ ಬಹ್ಲ್ ನಿರ್ದೇಶಿಸುತ್ತಿದ್ದು, ಏಕ್ತಾ ಕಪೂರ್ ಈ ಚಿತ್ರವನ್ನು ಗುಡ್ಕೋ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ‘ಗುಡ್ ಬೈ’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.








