ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹಿರಿಯ ವೈದ್ಯರು, ಹಿರಿಯ ವೈದ್ಯರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಸೇರಿದಂತೆ ವಿವಿಧ 2794 ವೈದ್ಯರ ಹುದ್ದೆಗಳಿಗೆ ಸರ್ಕಾರ ಅರ್ಜಿ ಆಹ್ವಾನಿಸಿ ಆದೇಶ ಹೊರಡಿಸಿದೆ.
ಹಲವು ವರ್ಷಗಳಿಂದ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರ ಕೊರತೆ ಸಾಮಾನ್ಯ ಸಂಗತಿಯಗಿತ್ತು. ಹೆಮ್ಮಾರಿ ಕೊರೊನಾಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ಗುತ್ತಿಗೆ ಅಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಂಡಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪರಿಣಾಮ ವೈದ್ಯರಿಗೆ ವಿಶ್ರಾಂತಿ ಇಲ್ಲದೆ ಇಡೀ ದಿನ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ 2794 ಹಿರಿಯ ವೈದ್ಯರ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ.
ಬ್ಯಾಕ್ಲಾಗ್, ಮೂಲ ವೃಂದ ಹಾಗೂ ಹೈದ್ರಾಬಾದ್ ಕರ್ನಾಟಕ ವೃಂದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕ:16-09-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-10-2020
ಶುಲ್ಕ ಪಾವತಿಸಲು ಕಡೆ ದಿನ: 16-10-2020
ಯಾವ ಹುದ್ದೆಗಳು, ಖಾಲಿ ಇರುವ ಹುದ್ದೆಗಳು ಎಷ್ಟೆಷ್ಟು..
1. ಹಿರಿಯ ವೈದ್ಯಾಧಿಕಾರಿ(ಜನರಲ್ ಮೆಡಿಸಿನ್):ಬ್ಯಾಕ್ಲಾಗ್-171, ಸಾಮಾನ್ಯ-70
2. ಹಿರಿಯ ವೈದ್ಯಾಧಿಕಾರಿ (ಜನರಲ್ ಸರ್ಜರಿ): ಬ್ಯಾಕ್ಲಾಗ್-58, ಸಾಮಾನ್ಯ-31
3.ಹಿರಿಯ ವೈದ್ಯಾಧಿಕಾರಿ(ಸ್ತ್ರೀರೋಗ, ಪ್ರಸೂತಿ: ಬ್ಯಾಕ್ಲಾಗ್-109, ಸಾಮಾನ್ಯ-170
4. ಹಿರಿಯ ವೈದ್ಯಾಧಿಕಾರಿ (ಇಎನ್ಟಿ): ಬ್ಯಾಕ್ಲಾಗ್-23, ಸಾಮಾನ್ಯ-26
5. ಹಿರಿಯ ವೈದ್ಯಾಧಿಕಾರಿ (ಚರ್ಮರೋಗ): ಬ್ಯಾಕ್ಲಾಗ್-60, ಸಾಮಾನ್ಯ-48
6. ಹಿರಿಯ ವೈದ್ಯಾಧಿಕಾರಿ (ಅರವಳಿಕೆ): ಬ್ಯಾಕ್ಲಾಗ್-35, ಸಾಮಾನ್ಯ-195
7. ಹಿರಿಯ ವೈದ್ಯಾಧಿಕಾರಿ(ಮಕ್ಕಳ ತಜ್ಞ): ಬ್ಯಾಕ್ಲಾಗ್-105, ಸಾಮಾನ್ಯ-191
8. ಹಿರಿಯ ವೈದ್ಯಾಧಿಕಾರಿ( ನೇತ್ರ ತಜ್ಞ): ಬ್ಯಾಕ್ಲಾಗ್-44, ಸಾಮಾನ್ಯ-38
9. ಹಿರಿಯ ವೈದ್ಯಧಿಕಾರಿ (ಮೂಳೆ, ಕೀಲು ರೋಗ): ಬ್ಯಾಕ್ಲಾಗ್-03, ಸಾಮಾನ್ಯ-28
10. ಹಿರಿಯ ವೈದ್ಯಾಧಿಕಾರಿ(ರೆಡಿಯಾಲಜಿ): ಬ್ಯಾಕ್ಲಾಗ್-28, ಸಾಮಾನ್ಯ-27
11. ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ: ಬ್ಯಾಕ್ಲಾಗ್-19, ಸಾಮಾನ್ಯ-195, ಹೈ-ಕ:151
12; ದಂತ ಆರೋಗ್ಯಾಧಿಕಾರಿ : ಬ್ಯಾಕ್ಲಾಗ್-02, ಸಾಮಾನ್ಯ-63, ಹೈ-ಕ; 25








