ಡಾ. ರಾಜ್ ಕುಮಾರ್ ಅವರ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಂಡ ಗೂಗಲ್
ವರನಟ ಡಾ. ರಾಜ್ ಕುಮಾರ್ ಅವರಿಗೆ ಇತ್ತೀಚೆಗೆ ಗೂಗಲ್ ನಲ್ಲಿ ಮಾಡಿದ್ದಕ್ಕೆ ಕನ್ನಡಾಭಿಮಾನಿಗಳು , ಅಣ್ಣವ್ರ ಅಭಿಮಾನಿಗಳು , ಸ್ಯಾಮಡಲ್ ವುಡ್ ಸಿನಿಮಾ ತಾರಯರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಗೂಗಲ್ ತನ್ನ ತಪ್ಪನ್ನ ಸರಿಪಡಿಸಿಕೊಂಡಿದೆ.. ತಮಿಳು ಚಿತ್ರದಲ್ಲಿ ಕಲಾವಿದರ ತಂಡದಲ್ಲಿ ರಾಜ್ ಕುಮಾರ್ ಫೋಟೋ ಬಳಸಿದ್ದಲ್ಲದೇ ಅದರ ಕೆಳಗೆ ‘ಹಾಫ್ ಬಾಯ್ಲ್’ ಎಂದು ಹೆಸರು ಹಾಕಲಾಗಿತ್ತು. ಗೂಗಲ್ ಮಾಡಿದ ಈ ಎಡವಟ್ಟಿಗೆ ಕನ್ನಡ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದು ಕನ್ನಡಕ್ಕೆ ಮಾಡಿದ ಅವಮಾನ, ಅಣ್ಣಾವ್ರ ಹೆಸರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಹ ಟ್ವೀಟ್ ಮಾಡಿ ಖಂಡಿಸಿದ್ದರು. ಇದೀಗ, ಗೂಗಲ್ ಈ ತಪ್ಪನ್ನು ಸರಿಪಡಿಸಿಕೊಂಡಿದೆ. ಗೂಗಲ್ ನಲ್ಲಿ ವಿಕ್ರಂವೇದ ಸಿನಿಮಾ ಎಂದು ಟೈಪ್ ಮಾಡಿದರೆ, ಆ ಚಿತ್ರದ ಕಲಾವಿದರ ಪಟ್ಟಿಯಲ್ಲಿ ರಾಜ್‌ಕುಮಾರ್ ಭಾವಚಿತ್ರ ಬರ್ತಿತ್ತು. ಈಗ, ಈ ಪಟ್ಟಿಯಲ್ಲಿ ಅಣ್ಣಾವ್ರ ಫೋಟೋ ತೆಗೆಯಲಾಗಿದೆ. ರಾಜ್ ಕುಮಾರ್ ಎಂಬ ಕಲಾವಿದ ನಟಿಸಿದ್ದು, ಈಗ ಮೂಲ ವ್ಯಕ್ತಿಯ ಫೋಟೋ ಹಾಕಲಾಗಿದೆ.
ಇನ್ನೂ ಅಣ್ಣಾವ್ರ ಫೋಟೋ ಮತ್ತು ಹೆಸರು ಗೂಗಲ್‌ನಲ್ಲಿ ತಪ್ಪಾಗಿ ಬಳಕೆಯಾಗುತ್ತಿದೆ ಎನ್ನುವ ವಿಚಾರ ತಿಳಿದ ತಕ್ಷಣ , ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ಟಿ ರಿಪೋರ್ಟ್ ಮಾಡಲು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಅಲ್ಲದೇ ಸಾಕಷ್ಟು ಸಿನಿಮಾ ತಾರೆಯರು ಗೂಗಲ್ ವಿರುದ್ಧ ಆಕ್ರೋಶ ಹೊರಹಾಕಿದ್ದರು..
ಇನ್ನೂ ಕಳೆದ ಕೆಲ ದಿನಗಳ ಹಿಂದಷ್ಟೇ ಗೂಗಲ್ ಮೂಲಕ ಕನ್ನಡ ಬಾಷೆಗೆ ಅವಮಾನವಾಗಿದ್ದ ಬಗ್ಗೆಯೂ ಸಿನಿಮಾ ತಾರೆಯರು ಕನ್ನಡಿಗರು ಗೂಗಲ್ ವಿರುದ್ಧ ಆಕ್ರೋಶ ಹೊರಹಾಕಿ ಅಭಿಯಾನ ನಡೆಸಿದ್ದರು.. ಗೂಗಲ್ ನಲ್ಲಿ ಕೆಟ್ಟ ಬಾಷೆ ಯಾವುದು ಅಂತ ಸರ್ಚ್ ಮಾಡಿದಾಗ ಪೋರ್ಟಲ್ ಒಂದ್ರಲ್ಲಿ ಕನ್ನಡ ೆಮದು ತೋರಿಸಲಾಗುತ್ತಿತ್ತು.. ಆದ್ರೆ ಆ ಪಾರ್ಟಲ್ ಬ್ಲಾಕ್ ಆಗಿದೆ.. ಆದ್ರೆ ಇದೇ ಗೂಗಲ್ ನಲ್ಲಿ ಬಾಷೆಗಳ ರಾಣಿ ಎಮದು ಕನ್ನಡವನ್ನೇ ತೋರಿಸಲಾಗ್ತಿತ್ತು..