ನವದೆಹಲಿ: ಭಾರತದ ಡಿಜಿಟಲೀಕರಣ ಕ್ರಾಂತಿಗೆ ಮತ್ತಷ್ಟು ಬಲ ತುಂಬಲು ತೀರ್ಮಾನಿಸಿರುವ ಗೂಗಲ್ ಸಿಇಒ ಹಾಗೂ ಭಾರತೀಯ ಸಂಜಾತ ಸುಂದರ್ ಪಿಚೈ, 75 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಪ್ರಕಟಿಸಿದ್ದಾರೆ.
ಮುಂದಿನ 5-7 ವರ್ಷಗಳಲ್ಲಿ ಭಾರತದಲ್ಲಿ ನಾವು 75 ಸಾವಿರ ಕೋಟಿ ರೂ. ಅಂದರೆ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಡಿಜಿಟಲ್ ಇಂಡಿಯಾಗೆ ಕೈಜೋಡಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾವು ಎಲ್ಲಾ ವಲಯಗಳಲ್ಲೂ ಸಮಾನ ಹೂಡಿಕೆ ಮಾಡಲು ಚಿಂತಿಸಿದ್ದೇವೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.
ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಆರ್ಥಿಕತೆ ಹಾಗೂ ಭಾರತದ ಭವಿಷ್ಯದ ಕುರಿತಾಗಿ ನಮ್ಮಲ್ಲಿರುವ ಭರವಸೆಯ ಪ್ರತೀಕವಾಘಿ ಈ ಹೂಡಿಕೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇಂಡಿಯಾ ಡಿಜಿಟೈಸೇಶನ್ ಫಂಡ್ ಮೂಲಕ ಆಲ್ಫಾಬೆಟ್‍ನ ಗೂಗಲ್ ಈಕ್ವಿಟಿ ಹೂಡಿಕೆ, ಪಾಲುದಾರಿಕೆ ಒಪ್ಪಂದಗಳು ಹಾಗೂ ಮೂಲಸೌಕರ್ಯ ಸೇರಿದಂತೆ ಇತರೆ ಕಾರ್ಯಗಳಿಗೆ 75 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಸುಂದರ್ ಪಿಚೈ ವಿವರಿಸಿದ್ದಾರೆ.
ಕನ್ನಡ, ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ನಾವುದೇ ಪ್ರಾದೇಶಿಕ ಭಾಷೆಯಲ್ಲಿ ಪ್ರತಿ ಭಾರತೀಯರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡುವುದು..
ಭಾರತದ ವಿಶಿಷ್ಟ ಅಗತ್ಯಗಳಗಾಗಿಯೇ ಹೊಸ ಉತ್ಪನ್ನ ಹಾಗೂ ಸೇವೆಗಳನ್ನು ಅಭಿವೃದ್ಧಿಪಡಿಸುವುದು
ಉದ್ಯಮ ವ್ಯವಹಾರಗಳಲ್ಲಿ ಡಿಜಿಟಲೀಕರಣ ಅಳವಡಿಕೆಗೆ ಸ್ಥೈರ್ಯ ತುಂಬುವುದು
ಆರೋಗ್ಯ ಶಿಕ್ಷಣ ಹಾಗೂ ಕೃಷಿ ವಲಯಗಳು ಸೇರಿದಂತೆ ಸಾಮಾಜಿಕ ಒಳಿಗಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಮತ್ತೆಯ ಪೂರ್ಣ ಬಳಕೆ ಮಾಡುವುದು ಗೂಗಲ್‍ನ ಉದ್ದೇಶವಾಗಿದೆ ಎಂದು ಗೂಗಲ್ ತಿಳಿಸಿದೆ.