2021ರಲ್ಲಿ – 10 ಸಾವಿರ ಉದ್ಯೋಗ ಸೃಷ್ಟಿಸಲಿದೆ ಗೂಗಲ್..!
ಅಂತರ್ಜಾಲ ಪ್ಲಾಟ್ ಫಾರ್ಮ್ ನ ದೈತ್ಯ ಗೂಗಲ್ 10,000 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದಾರೆ. ಜೊತೆಗೆ ಅಮೆರಿಕದಾದ್ಯಂತ 7 ಬಿಲಿಯನ್ ಡಾಲರ್ ಅನ್ನು ಕಚೇರಿ ಮತ್ತು ಡೇಟಾ ಕೇಂದ್ರಗಳಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿಕೊಂಡಿರುವುದಾಗಿಯೂ ತಿಳಿಸಿದ್ದಾರೆ. ಹೌದು ಈ ವರ್ಷ ಕನಿಷ್ಠ 10,000 ಪೂರ್ಣಾವಧಿಯ ಉದ್ಯೋಗ ಸೃಷ್ಟಿಸುವ ಚಿಂತನೆಯಲ್ಲಿದೆ ಗೂಗಲ್ ಸಂಸ್ಥೆ.
ಗೂಗಲ್ ಕಂಪನಿ ಈ ವರ್ಷ ಅಮೆರಿಕದಲ್ಲಿ 7 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹಣ ಹೂಡಿಕೆ ಮಾಡುತ್ತದೆ. ಈ ಮೂಲಕ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಟೆಕ್ ದೈತ್ಯ ಸಿಇಒ ಭರವಸೆ ನೀಡಿದ್ದು, ಐಟಿ ಕ್ಷೇತ್ರದಲ್ಲಿ ನೌಕರಿ ಆಕಾಂಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಚೈನಾ ಲಸಿಕೆ ಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ಪಾಸಿಟಿವ್..!
ಮೇಡ್ ಇನ್ ಇಂಡಿಯಾ ಮೈಕ್ರೊಮ್ಯಾಕ್ಸ್ ಸ್ಮಾರ್ಟ್ಫೋನ್ : ಫೀಚರ್ ಗಳು..!
ಭಾರತೀಯ ರೈಲ್ವೆ ಖಾಸಗೀಕರಣಗೊಳ್ಳುವುದಿಲ್ಲ – ರೈಲ್ವೆ ಸಚಿವ ಪಿಯೂಷ್ ಗೋಯಲ್