ನ್ಯೂಯಾರ್ಕ್: 45 ದಿನಗಳಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಅಮೆರಿಕಾದ ಸಂಸ್ಥೆಗಳಿಗೆ ಹಸ್ತಾಂತರಿಸಿ. ಇಲ್ಲವಾದಲ್ಲಿ ನಿಷೇಧದ ಶಿಕ್ಷೆ ಎದುರಿಸಿ ಎಂದು ಆಗಸ್ಟ್ 6ರಂದು ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ಅಪ್ಲಿಕೇಶನ್ ಗೆ ಆದೇಶ ನೀಡಿದ್ರು. ಆದರೆ ಇದಕ್ಕೆ ಒಪ್ಪದ ಚೀನಾ ಮೂಲದ ಬೈಟೇಡ್ಯಾನ್ಸ್ ಒಡೆತನದ ಟಿಕ್ ಟಾಕ್ ಕಂಪೆನಿ ಇದೀಗ ತಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದು, ವಿಫಲಾಗಿವೆ.
ಇತ್ತ ಕೆಲ ದಿನಗಳಿಂದ ಟೆಕ್ ದೈತ್ಯ ಕಂಪೆನಿಗಳಾದ ಗೂಗಲ್ ಮತ್ತು ನೆಟ್ ಫ್ಲಿಕ್ಸ್ ಸಂಸ್ಥೆ ಟಿಕ್ ಟಾಕ್ ಖರೀದಿಸಲಿವೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದೀಗ ಇದಕ್ಕೆ ತೆರೆ ಬಿದ್ದಿದೆ. ಟಿಕ್ ಟಾಕ್ ಖರೀದಿಸುವ ಯಾವುದೇ ಉತ್ಸಾಹ ಇಲ್ಲ ಎಂದು ಹೇಳುವ ಮೂಲಕ ನೆಟ್ ಫ್ಲಿಕ್ಸ್ ಮತ್ತು ಗೂಗಲ್ ಊಹಾಪೋಹಗಳಿವೆ ತೆರೆ ಎಳೆದಿವೆ.
![]()
ಇತ್ತೀಚೆಗಷ್ಟೇ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಹಿನ್ನಲೆಯಲ್ಲಿ ಟಿಕ್ ಟಾಕ್ ಆಪ್ ಅನ್ನು ಭಾರತ, ಅಮೆರಿಕಾ ಸೇರಿದಂತೆ ಹಲವೆಡೆ ನಿಷೇಧ ಮಾಡಲಾಗಿದೆ. ಆದರೇ ಅಮೆರಿಕಾ ಸರ್ಕಾರ ತಮ್ಮ ದೇಶದ ಕಂಪನಿಗಳಿಗೆ ಈ ಆಪ್ ಮಾರಾಟ ಮಾಡುವ ಮೂಲಕ ಕಾರ್ಯನಿರ್ವಹಿಸಬಹುದು ಎಂಬ ಆದೇಶ ಹೊರಡಿಸಿದೆ.









