ಸ್ಮಶಾಣವಾಯ್ತು ಎಂಗೇಜ್ ಮೆಂಟ್ ಹಾಲ್… ಮಂಟಪಕ್ಕೆ ನುಗ್ಗಿ ಯುವಕನಿಗೆ ಗುಂಡಿಟ್ಟ ದುಷ್ಕರ್ಮಿಗಳು
ಚಂಡೀಗಢ : ಲವಲವಿಕೆಯಿಂದ ಎಲ್ಲರೂ ಸಂಭ್ರಮದಲ್ಲಿ ಇದ್ದ ನಿಶ್ಚಿತಾರ್ಥದ ಸಮಾರಂಭದ ಹಾಲ್ ಕೆಲವೇ ಕ್ಷಣಗಳಲ್ಲಿ ಸ್ಮಷಾಣವಾಗಿ ಮಾರ್ಪಟ್ಟಿದ್ದ ಘಟನೆಯೊಂದು ಫರಿದಾಬಾದ್ ನಲ್ಲಿ ನಡೆದಿದೆ.. ಹೌದು… ಕೆಲ ದುಷ್ಕರ್ಮಿಗಳು ಏಕಾಏಕಿ ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ 27 ವರ್ಷದ ಯುವಕನನ್ನು ಗುಂಡಿಕ್ಕಿ ಕೊಂದಿದ್ದಾರೆ… ಇಂತಹದೊಂದು ಆಘಾತಕಾರಿ ಘಟನೆ ಫರಿದಾಬಾದ್ ನ ಟಿಗಾಂವ್‍ನಲ್ಲಿ ನಡೆದಿದೆ.
ಮೃತ ದುರ್ದೈವಿ ಕಪಿಲ್ ಅದಾನ ಮತ್ತು ಆತನ ಸಹೋದರ ಸತ್ನಾಮ್ ಫರಿದಾಬಾದ್ ನ ಟಿಗಾಂವ್‍ನಲ್ಲಿ ನಡೆಯುತ್ತಿದ್ದ ತಮ್ಮ ಸಂಬಂಧಿ ನಿಶ್ಚಿತಾರ್ಥಕ್ಕೆ ಹೋಗಿದ್ದರು. ಆಗ ಕಪಿಲ್ ಮತ್ತು ಸತ್ನಾಮ್ ಊಟ ಮಾಡುವಾಗ ದುಷ್ಕರ್ಮಿಗಳು ಬಂದು ಕಪಿಲ್ ಮೇಲೆ ಗುಂಡು ಹಾರಿಸಿದ್ದಾರೆ.
ಇನ್ನೂ ಈ ಸಂಬಂಧ ಟಿಗಾಂವ್ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ ಗಳ ಕೇಸ್ ದಾಖಲು ಮಾಡಲಾಗಿದೆ.. ಮೃತ ಕಪಿಲ್ ಅದಾನ ಟಿಗಾಂವ್ ಗ್ರಾಮದ ನಿವಾಸಿ. ಸಾಗರ್ ಮತ್ತು ಆಕಾಶ್ ಎಂದು ಗುರುತಿಸಲಾದ ಇಬ್ಬರು ಪುರುಷರು ಅವರ ಸೋದರಳಿಯ ಸೋನು ಅವರ ಗಾರ್ಮೆಂಟ್ಸ್ ಅಂಗಡಿಗೆ ಡಿಸೆಂಬರ್ 6 ರಂದು ಶಾಪಿಂಗ್ ಮಾಡುವ ನೆಪದಲ್ಲಿ ನುಗ್ಗಿದ್ದರು.
ಈ ವೇಳೆ ಆಕಾಶ್ ಮತ್ತು ಸಾಗರ್ ಕಪಿಲ್ ಮಗನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿದ್ದ 3,500 ರೂ. ಎತ್ತಿಕೊಂಡು ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಘಟನೆಯ ನಂತರ ಕಪಿಲ್ ಟಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಅಂದಿನಿಂದ ಆರೋಪಿಗಳು ಪ್ರಕರಣವನ್ನು ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಇದೇ ಹಿನ್ನೆಲೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕಪಿಲ್, ಸಹೋದರ ಸತ್ನಾಮ್, ಸೋದರಳಿಯ ಸೋನು ಮತ್ತು ಇನ್ನೊಬ್ಬ ಸಂಬಂಧಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದಾಗ ಸಾಗರ್ ಮತ್ತು ಆಕಾಶ್ ಸ್ಥಳಕ್ಕೆ ಬಂದು ಮತ್ತೆ ಪೊಲೀಸ್ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಕಪಿಲ್ ನಿರಾಕರಿಸಿದಾಗ ವಾಗ್ವಾದ ನಡೆದಿದ್ದು ಸಾಗರ್ ಕಪಿಲ್‍ಗೆ ಗುಂಡು ಹಾರಿಸಿದ್ದಾನೆ. ನಂತರ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..






