ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಥಾಲಾ ನಿಲಯಕ್ಕೆ ಸ್ವಾಗತ.. ನಾನು ಗೋಪಿಕೃಷ್ಣನ್.. ಇದು ಅಂತಿಂಥ ಮನೆಯಲ್ಲ.. ನನ್ನರಮನೆಯಲ್ಲಿ ಧೋನಿ..!

Sanath Rai by Sanath Rai
October 15, 2020
in IPL 2020, Newsbeat, ಕ್ರೀಡೆ
dhoni fans house dhoni ipl 2020 saakshatv
Share on FacebookShare on TwitterShare on WhatsappShare on Telegram

ಥಾಲಾ ನಿಲಯಕ್ಕೆ ಸ್ವಾಗತ.. ನಾನು ಗೋಪಿಕೃಷ್ಣನ್.. ಇದು ಅಂತಿಂಥ ಮನೆಯಲ್ಲ.. ನನ್ನರಮನೆಯಲ್ಲಿ ಧೋನಿ..!

gopikrishnan csk dhoni fans saakshatvಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿರುವ ತಂಡ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತಲೂ ಅಲ್ಲಿ ಗಮನ ಸೆಳೆಯುತ್ತಿರುವುದು ನಾಯಕ ಮಹೇಂದ್ರ ಸಿಂಗ್ ಧೋನಿ.
ಟೀಮ್ ಇಂಡಿಯಾದ ಮಾಜಿ ನಾಯಕ, ರಾಂಚಿಯ ಹೀರೋ ಮಹೇಂದ್ರ ಸಿಂಗ್ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರು ಮನೆಯಂತಾಗಿದೆ.
ಸಿಎಸ್ ಕೆ ಅಭಿಮಾನಿಗಳು ಧೋನಿಯವರನ್ನು ಮನೆ ಮಗನಂತೆ ಆರಾಧಿಸುತ್ತಾರೆ.. ಪೂಜಿಸುತ್ತಾರೆ. ಅಷ್ಟೇ ಅಲ್ಲ, ಧೋನಿಯವರನ್ನು ಥಾಲಾ ಪ್ರೀತಿಯಿಂದ ಕರೆಯುತ್ತಾರೆ. ಅಷ್ಟೊಂದು ಅಭಿಮಾನವನ್ನು ಸಿಎಸ್ ಕೆ ಅಭಿಮಾನಿಗಳು ಧೋನಿಯ ಮೇಲಿಟ್ಟಿದ್ದಾರೆ.
ಕಳೆದ 12 ಐಪಿಎಲ್‍ಗಳ ಪೈಕಿ ಎರಡು ಐಪಿಎಲ್ ಹೊರತುಪಡಿಸಿ ಸಿಎಸ್ ಕೆ ತಂಡ ಅದ್ಭುತ ಪ್ರದರ್ಶನವನ್ನೇ ನೀಡಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಧೋನಿಯ ಮೇಲಿನ ಅಭಿಮಾನವನ್ನು ವರ್ಣಿಸಲು ಸಾಧ್ಯವಿಲ್ಲ.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಕೆಲವೊಂದು ಟೀಕೆ, ಆಕ್ರೋಶಗಳು ಕೇಳಿಬಂದಿದ್ದವು. ಆದ್ರೂ ಇದೀಗ ಮತ್ತೆ ಗೆಲುವಿನ ಟ್ರ್ಯಾಕ್‍ಗೆ ಮರಳಿದೆ.
ಈ ನಡುವೆ ಚೆನ್ನೈ ನಲ್ಲಿ ಧೋನಿ ಅಭಿಮಾನಿಯೊಬ್ಬ ತನ್ನ ಮನೆಯನ್ನು ಪೂರ್ತಿಯಾಗಿ ಧೋನಿಮಯವಾಗಿಸಿಬಿಟ್ಟಿದ್ದಾರೆ.
ಗೋಪಿಕೃಷ್ಣನ್. ಇವರು ದುಬೈ ನಲ್ಲಿ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದೀಗ ತನ್ನೂರಿಗೆ ಬಂದಿದ್ದಾರೆ.
ಧೋನಿ ಮೇಲಿನ ಅಪಾರ ಅಭಿಮಾನಕ್ಕೆ ತನ್ನ ಮನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಜೆರ್ಸಿ ಬಣ್ಣದಂತೆ ಶೃಂಗಾರ ಮಾಡಿದ್ದಾರೆ.
dhoni fan house ipl 2020 csk saakshatvತಮಿಳಿನಾಡಿನ ಕುಡಲೋರ್ ಜಿಲ್ಲೆಯ ಅರಂಗೂರ್ ಬಳಿ ಗೋಪಿ ಕೃಷ್ಣನ್ ಅವರ ಮನೆ ಇದೆ.
ತನ್ನ ಮನೆಗೆ ಹೋಮ್ ಆಫ್ ಧೋನಿ ಫ್ಯಾನ್ಸ್ ಅಂತ ಹೆಸರಿಟ್ಟಿದ್ದಾರೆ. ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಗೋಪಿಕೃಷ್ಣನ್ ಅವರ ಮನೆಯ ಗೋಡೆಗಳ ಮೇಲೆ ಧೋನಿಯ ಬ್ಯಾಟಿಂಗ್ ಶೈಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೋಗೋ ಚಿತ್ರಗಳು ರಾರಾಜಿಸುತ್ತಿವೆ.
ಸುಮಾರು ವರ್ಷಗಳ ಹಿಂದೆಯೇ ಯೋಚನೆ ಮಾಡುತ್ತಿದ್ದೆ. ನನ್ನ ಮನೆಯನ್ನು ಧೋನಿಮಯವಾಗಿರಿಸಬೇಕು ಎಂದು. ಈ ಬಾರಿ ಸಿಎಸ್ ಕೆ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ತುಂಬಾ ಟೀಕೆಗಳು ಕೇಳಿಬರುತ್ತಿವೆ. ಆದ್ರೆ ನಾನು ಟೀಕೆಗಳನ್ನು ಸಹಿಸಿಕೊಳ್ಳುವುದಿಲ್ಲ. ನನ್ನ ಕೆಲವು ಗೆಳೆಯರು ಥಾಲಾ ಅವರ ಸಾಮಥ್ರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆಲ್ಲಾ ನಾನು ಉತ್ತರ ಕೊಟ್ಟು ಬಾಯಿಮುಚ್ಚಿಸಿದ್ದೇನೆ ಅಂತ ಹೇಳ್ತಾರೆ ಗೋಪಿಕೃಷ್ಣನ್.
ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗಂತ ನಾವು ಟೀಕೆ ಮಾಡುವುದು ಸರಿಯಲ್ಲ. ಕೆಲವು ಕೆಟ್ಟ ಪಂದ್ಯಗಳಿಂದ ವ್ಯಕ್ತಿಯನ್ನು ಹೀಯಾಳಿಸುವುದು ಸರಿಯಲ್ಲ. ಥಾಲಾ ನನಗೆ ಥಾಲಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಗೋಪಿಕೃಷ್ಣನ್.
ಥಾಲಾ ಏನು ಎಂಬುದನ್ನು ತೋರಿಸಬೇಕು ಅಂತ ಮನದಲ್ಲೇ ಯೋಚನೆ ಮಾಡುತ್ತಿದ್ದೆ. ಆಗ ಹೊಳೆದಿದ್ದೆ. ಮನೆಯನ್ನು ಧೋನಿಮಯವಾಗಿಸಬೇಕು ಎಂಬುದು. ನನ್ನ ಮನೆ ಪಕ್ಕಾ ಸಿಎಸ್‍ಕೆ ಫ್ಯಾನ್ಸ್ ಥರಾ ಆಗಿರಬೇಕು. ಇದಕ್ಕಾಗಿ ಪೈಂಟರ್ಸ್ ಮತ್ತು ಕಲಾವಿದರನ್ನು ಭೇಟಿ ಕೂಡ ಮಾಡಿದ್ದೆ. ನನ್ನ ಮನೆಗೆ ನಿಪ್ಪೋನ್ ಪೇಂಟ್ ಬಳಕೆ ಮಾಡಿಕೊಂಡಿದ್ದೇನೆ. ಯಾಕಂದ್ರೆ ನಿಪ್ಪೊನ್ ಕಂಪೆನಿಯು ಸಿಎಸ್ ಕೆ ತಂಡಕ್ಕೆ ಪ್ರಾಯೋಜಕತ್ವವನ್ನು ನೀಡಿದೆ. ಒಟ್ಟಾರೆ ಮನೆ ಪೇಟಿಂಗ್ ಮಾಡಲು ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ನನ್ನ ಮನೆಯವರು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದಾರೆ. ನನ್ನ ತಂದೆಯಂತೂ ipl 2020 dhoni dhoni fans home saakshatvನಿನಗೆ ಇಷ್ಟಬಂದ ಹಾಗೇ ಮಾಡು ಎಂದು ಹೇಳಿದ್ರು ಅಂತ ಗೋಪಿಕೃಷ್ಣನ್ ಅವರು ಹೇಳುತ್ತಾರೆ.
ಇನ್ನು ತನ್ನ ಮನೆಯ ಗೋಡೆಯ ಮೇಲೆ ಧೋನಿ ಚಿತ್ರ ಮತ್ತು ಸಿಎಸ್ ಕೆ ತಂಡದ ಲೋಗೋ ಚಿತ್ರವನ್ನು ಬಿಡಿಸಿದ್ದು ಪೊನ್ನು ಸೆಲ್ವರಸು. ಸೆಲ್ವರಸು ಕೇವಲ ಮೂರು ದಿನಗಳಲ್ಲಿ ತನ್ನ ಕೆಲಸವನ್ನು ಮುಗಿಸಿದ್ದಾರೆ. ಇದಕ್ಕಾಗಿ ನಾನು ಹೆಚ್ಚಿನ ಹಣವನ್ನು ಕೂಡ ಪಡೆದುಕೊಂಡಿಲ್ಲ. ಗೋಪಿ ನನ್ನ ಗೆಳೆಯ. ಜೊತೆಗೆ ಧೋನಿ ಮತ್ತು ಸಿಎಸ್ ಕೆ ಅಭಿಮಾನದಿಂದ ಈ ಕೆಲಸವನ್ನು ಮಾಡಿದ್ದೇನೆ. ಈಗ ಎಲ್ಲಾ ಕಡೆಯಿಂದ ಕರೆಗಳು ಬರುತ್ತಿವೆ. ಸರ್ಕಾರಿ ಶಾಲೆಯ ಡ್ರಾಯಿಂಗ್ ಶಿಕ್ಷಕರಾಗಿರುವ ಸೆಲ್ವರಸು ಅವರಿಗೂ ಈಗ ಅಭಿಮಾನಿಗಳಾಗಿದ್ದಾರೆ.
ಈಗ ಗೋಪಿಕೃಷ್ಣನ್ ಅವರ ಮನೆಯನ್ನು ನೋಡಲು ಪ್ರತಿ ದಿನ 500ಕ್ಕೂ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಜೊತೆಗೆ ಸೆಲ್ಫಿ ಕೂಡ ತೆಗೆದುಕೊಳ್ಳುತ್ತಿದ್ದಾರೆ.
ನಾನು ದುಬೈನಲ್ಲಿ ಇರುತ್ತಿದ್ರೆ ಸಿಎಸ್ ಕೆ ಪಂದ್ಯವನ್ನು ನೋಡಬಹುದಿತ್ತು. ಆದ್ರೆ ಸಿಎಸ್ ಕೆ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಗೋಪಿಕೃಷ್ಣನ್ ಬೇಸರದಿಂದ ಹೇಳಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಗೋಪಿಕೃಷ್ಣನ್ ಅವರು ಥಾಲಾ ಧೀನಿಯ ಮೇಲೆ ಟೀಕೆ ಮಾಡಿದವರಿಗೆ ತನ್ನ ಅಭಿಮಾನದ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ.

Related posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

March 4, 2026

ಅದೇ ರೀತಿ ಧೋನಿ ಈ ಬಾರಿಯ ಐಪಿಎಲ್ ನಲ್ಲೂ ಪ್ರಶಸ್ತಿ ಗೆದ್ದೆ ಗೆಲ್ಲುತ್ತಾರೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Tags: #saakshatvchennai super kingscskcsk colorGopi Krishnanm.s.dhoni fansMahendra Singh DhoninipponPon Selvarasu
ShareTweetSendShare
Join us on:

Related Posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

by Shwetha
March 4, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಭಾರತವು ಈ ವಿಚಾರದಲ್ಲಿ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು ಎಂದು ಹೇಳಿದ್ದಾರೆ. ಇರಾನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram