ಸರ್ಕಾರದ ಜೀವಂತವಾಗಿದ್ಯೋ ಸತ್ತಿದ್ಯೊ : ಹೆಚ್.ವಿಶ್ವನಾಥ್
ಮೈಸೂರು : ಸರ್ಕಾರದ ಜೀವಂತವಾಗಿದ್ಯೋ ಸತ್ತಿದ್ಯೊ..? ಮುಖ್ಯಮಂತ್ರಿ ಕೈಯಲ್ಲಿ ಇಲಾಖೆ ಬಂದು ನಾಲ್ಕೈದು ತಿಂಗಳಾಯ್ತು. ಸಿಎಂ ಕೈಯಲ್ಲಿ ಬಂದ ಇಲಾಖೆಗಳು ಸತ್ತುಹೋಗ್ತಿವೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಕೆಆರ್ ಎಸ್ ಬಿರುಕು ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಂಬಾಡಿ ಅಂತರಾಷ್ಟ್ರೀಯ ಪ್ರವಾಸಿ ತಾಣ. ಜನರ ನಡುವಿನ ಭಾವನಾತ್ಮಕ ಸಂಕೇತ ಅಂತಾ ಇಂದು ಉಳಿದಿದ್ದರೆ ಅದು ಕನ್ನಂಬಾಡಿ. ರಾಜಪ್ರಭುತ್ವದ, ಪ್ರಜೆಗಳ ನಡುವಿನ ಸಂಕೇತ ಕನ್ನಂಬಾಡಿ. ಕನ್ನಂಬಾಡಿ ನಿರ್ಮಾಣವಾಗುವ ವೇಳೆ ಬಹಳಷ್ಟು ತ್ಯಾಗ ನಡೆದಿದೆ. ಸಾಕಷ್ಟು ಗ್ರಾಮಗಳು ಮುಳುಗಡೆ ಆಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಏನೇನೋ ಮಾತನಾಡುತ್ತಿದ್ದಾರೆ. ಹೀಗಾಗಿಯೇ ಕನ್ನಂಬಾಡಿ ಬಗ್ಗೆ ಮಾತನಾಡಬೇಕು ಎನಿಸಿದೆ. ಕನ್ನಂಬಾಡಿ ನಮ್ಮ ಅಭಿಮಾನದ ಸಂಕೇತ. ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನು ಮಾರಿ ಈ ಹಣೆಕಟ್ಟೆಗೆ ದುಡ್ಡು ಕೊಟ್ಟಿದ್ರು. ಸುಮಾರು 70 ಲಕ್ಷ ಹಣವನ್ನ ರಾಜಮನೆಯನದ ಹೆಣ್ಣುಮಕ್ಕಳು ಬೊಂಬಾಯಿಗೆ ಹೋಗಿ ಮಾರಿ ತಂದುಕೊಟ್ಟರು. ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದಲೂ ಡ್ಯಾಂ ನಿರ್ಮಾಣಕ್ಕೆ ವಸ್ತುಗಳು ಬಂದಿವೆ. ಬೇರೆ ಬೇರೆ ದೇಶದ ಇಂಜಿನಿಯರ್ಸ್, ಸರ್. ಎಂ.ವಿ ಅವ್ರ ಬುದ್ಧಿಶಕ್ತಿ ಇಲ್ಲಿ ಬಳಕೆಯಾಗಿದೆ. ಕನ್ನಂಬಾಡಿ ಬಿರುಕು ಬಿಟ್ಟಿದೆ ಅನ್ನೋದು ಆತಂಕ ತಂದಿದೆ ಎಂದರು.
ಇನ್ನು ರಾಜ ಪ್ರಭುತ್ವದಲ್ಲಿ ನಿರ್ಮಾಣ ಆಗಿದ್ದಕ್ಕೆ ಬಿರುಕು ಬಿಟ್ಟಿಲ್ಲ. ಬಹುಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದ್ರೆ ಕಮಿಷನ್, ಕಿಕ್ ಬ್ಯಾಕ್ ತಗೊಂಡು ನಿರ್ಮಾಣ ಮಾಡ್ತಿದ್ರು. ಈವಾಗ ನಿರ್ಮಾಣವಾಗಿದ್ರೆ ಬಿರುಕು ಬಿಡುತ್ತಿತ್ತೇನೋ..? ಎಂಪಿ ಬಿರುಕು ಬಿಟ್ಟಿದೆ ಅಂತಾರೇ, ಮಾಜಿ ಸಿಎಂ ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲ ಅಂತಾರೇ. ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಯಾಕೆ ಬೇಕು ಉಸ್ತುವಾರಿ ಮಂತ್ರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರ್ಕಾರದ ಜೀವಂತವಾಗಿದ್ಯೋ ಸತ್ತಿದ್ಯೊ..? ಮುಖ್ಯಮಂತ್ರಿ ಕೈಯಲ್ಲಿ ಇಲಾಖೆ ಬಂದು ನಾಲ್ಕೈದು ತಿಂಗಳಾಯ್ತು. ಸಿಎಂ ಕೈಯಲ್ಲಿ ಬಂದ ಇಲಾಖೆಗಳು ಸತ್ತುಹೋಗ್ತಿವೆ. ಜವಾಬ್ದಾರಿಯುವ ಜನ ನಾಯಕರು ಜನರ ಹಿತವನ್ನು ಮರೆದು ಬೀದಿಗೆ ಬಂದವ್ರಿಗೆ ಯಾರು ಬುದ್ದಿ ಹೇಳ್ತಾರೆ. ಕೆ.ಆರ್.ಎಸ್ ಅನ್ನ ರಾಜಕೀಯಕ್ಕೆ ತಂದಿದ್ದಾರೆ. ಅಕ್ರಮ ಗಣಿಗಾರಿಕೆ ಇದ್ರೆ ಸರ್ಕಾರಕ್ಕೆ ಹೇಳಿ. ತಕ್ಷಣವೇ ಕನ್ನಂಬಾಡಿ ವಿಚಾರದಲ್ಲಿ ಮೀಟಿಂಗ್ ಮಾಡಿ. ಅಲ್ಲಿ ಏನ್ ಆಗಿದೆ ಅನ್ನೋದನ್ನ ಜನ್ರಿಗೆ ಹೇಳಿ ಆತಂಕ ನಿವಾರಣೆ ಮಾಡಿ ಎಂದು ವಿಶ್ವನಾಥ್ ಒತ್ತಾಯಿಸಿದರು.