ಉಕ್ರೇನಿಂದ ಮರಳಿದ ವಿದ್ಯಾರ್ಥಿಗಳ ಶಿಕ್ಷಣ ಪೂರೈಕೆಗೆ ಸರ್ಕಾರದ ಚಿಂತನೆ…
ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ನಿಂದ ದೇಶಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಪರಿಶೀಲಿಸುವುದಾಗಿ ಸರ್ಕಾರ ಸೋಮವಾರ ಲೋಕಸಭೆಗೆ ಭರವಸೆ ನೀಡಿದೆ.
ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆಪರೇಷನ್ ಗಂಗಾ “130 ಕೋಟಿ ಭಾರತೀಯರ ಬುದ್ಧಿವಂತಿಕೆ”ಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಉಕ್ರೇನ್ನ ನೆರೆಯ ರಾಷ್ಟ್ರಗಳ ವಿಶ್ವವಿದ್ಯಾನಿಲಯಗಳೊಂದಿಗೆ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು “ಯಾವುದೇ ನೀತಿ ಅಥವಾ ಮಾತುಕತೆಯ ಬಗ್ಗೆ ಸರ್ಕಾರವು ಚಿಂತಿಸುತ್ತಿದೆಯೆ ? ಎಂದುಪ್ರಶ್ನೆ ಮಾಡಲು ಬಯಸಿದ ಕಾಂಗ್ರೆಸ್ ಸದಸ್ಯ ಗೌರವ್ ಗೊಗೋಯ್ ಅವರ ಪ್ರಶ್ನೆಗೆ ಪ್ರಧಾನ್ ಉತ್ತರಿಸುತ್ತಿದ್ದರು..
ಅವರು ಭವಿಷ್ಯದಲ್ಲಿ ವೈದ್ಯರಾಗಲು ಅಗತ್ಯವಿರುವ ಯಾವುದೇ ವ್ಯವಸ್ಥೆಗಳನ್ನ ಮಾಡಲು ಸರ್ಕಾರ ಸಿದ್ಧವಿದೆ ಎಂದು ಎಂದು ಸಚಿವರು ಪ್ರತಿಕ್ರಿಯಿಸಿದರು. “ಸದ್ಯ, ಅವರನ್ನು ಆಘಾತದಿಂದ ಹೊರತರುವ ಸಮಯ ಬಂದಿದೆ. ನಾವೆಲ್ಲರೂ ಅದರಲ್ಲಿ ತೊಡಗಿದ್ದೇವೆ” ಎಂದು ಸಚಿವರು ಸೇರಿಸಿದರು. “