ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಅಟ್ಟರ್ ಫ್ಲಾಪ್ : ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ : ಕೊರೊನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಅಟ್ಟರ್ ಫ್ಲಾಪ್ ಆಗಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ಸರ್ಕಾರದ ವಿರುದ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದವರು ಮಾತನಾಡಿದ್ರೆ, ರಾಜಕಾರಣ ಮಾಡ್ತೀವಿ ಅಂತಾ ಹೇಳ್ತಾರೆ. ಪ್ರತಿಪಕ್ಷದಲ್ಲಿದ್ದರೂ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತಿದ್ದೇವೆ. ಯಾವತ್ತೂ ರಾಜಕಾರಣ ಮಾಡಿಲ್ಲ ಎಂದರು. ಹಾಗೇ ನಮ್ಮ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಬೆಳಗಾವಿ ಬಿಮ್ಸ್ ಅವಾಂತರವನ್ನ ತೋರಿಸಿದ್ದೀರಿ ಎಂದು ಮಾಧ್ಯಮಗಳನ್ನು ಹೊಗಳಿಸಿದರು.
ಇದೇ ವೇಳೆ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹೆಬ್ಬಾಳ್ಕರ್, ನಮ್ಮ ನಾಯಕರೆಲ್ಲರು ಸೇರಿ ಲೆಕ್ಕ ಕೊಡಿ ಅಭಿಯಾನ ಶುರು ಮಾಡಿದ್ದೇವೆ. ರಾಮನ ಲೆಕ್ಕ.. ಕೃಷ್ಣನ ಲೆಕ್ಕ ಬೆಳಗಾವಿಯಲ್ಲಷ್ಟೇ ಅಲ್ಲ, ಮೇಲೂ ಆಗಿದೆ ಎಂದು ಆರೋಪಿಸಿದರು.
ಬೆಳಗಾವಿ ಜಿಲ್ಲೆಗೆ ಒಂದು ಸಾವಿರ ಪಿಪಿಇ ಕಿಟ್ ಕೊಟ್ಟಿದ್ದಾರೆ. ಓರ್ವ ಡಿಸಿಎಂ, ಮೂವರು ಸಚಿವರು, ನಾಲ್ವರು ನಿಗಮ ಮಂಡಳಿ ಅಧ್ಯಕ್ಷರು ಸೇರಿ ಜಿಲ್ಲೆಯ ಒಟ್ಟು 13 ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾರೆ. ಆದರೆ, ಈವರೆಗೂ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲೆ ಸೇರಿ ರಾಜ್ಯದಲ್ಲಿಯೂ ಸರ್ಕಾರ ಅಟ್ಟರ್ ಫ್ಲಾಫ್ ಆಗಿದೆ ಎಂದು ಕುಟುಕಿದರು.