ಮಲಿನಾ : ಆನ್ ಲೈನ್ ಮೀಟಿಂಗ್ ವೇಳೆ ಸರ್ಕಾರಿ ಅಧಿಕಾರಿಯೊಬ್ಬ ಕ್ಯಾಮೆರಾ ಆಫ್ ಮಾಡದೇ ತನ್ನ ಕಾರ್ಯದರ್ಶಿಯೊಂದಿಗೆ ಸೆಕ್ಸ್ ಮಾಡಿರುವ ಘಟನೆ ಫಿಲಿಪ್ಪೀನ್ಸ್ ನಲ್ಲಿ ನಡೆದಿದೆ. ಕ್ಯಾವೈಟ್ ಪ್ರಾಂತ್ಯದ ಫಾತಿಮಾ ಡಾಸ್ ಗ್ರಾಮ ಸದಸ್ಯ ಕ್ಯಾಪ್ಟನ್ ಜೀಸಸ್ ಎಸ್ಟಿಲ್, ಕೆಲಸದ ನಿಮಿತ್ತ ಝೂಮ್ ಆಪ್ ಮೂಲಕ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ. ಈ ವೇಳೆ ಅಲ್ಲಿಗೆ ಆತನ ಕಾರ್ಯದರ್ಶಿ ಅಲ್ಲಿಗೆ ಬಂದಿದ್ದಾಳೆ. ಆಗ ಎಸ್ಟಿಲ್ ಬ್ರೇಕ್ ತೆಗೆದುಕೊಂಡಿದ್ದಾನೆ.
ಈ ವೇಳೆ ಎಸ್ಟಿಲ್ ಝೂಮ್ ಕ್ಯಾಮೆರಾ ಆಫ್ ಮಾಡಲು ಹೋಗಿ ಬೇರೆ ಬಟನ್ ಒತ್ತಿದ್ದಾನೆ. ಹೀಗಾಗಿ ಕ್ಯಾಮೆರಾ ಆನ್ ಆಗಿತ್ತು. ಆದರೆ ಎಸ್ಟಿಲ್ ಕ್ಯಾಮೆರಾ ಆನ್ ಆಗಿದೆ ಎಂದು ತಿಳಿಯದೆ ಮಹಿಳೆಯೊಂಧಿಗೆ ಸೆಕ್ಸ್ ಮಾಡಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆನ್ಲೈನ್ ನಲ್ಲಿ ಮೀಟಿಂಗ್ ನಡೆಯುತ್ತಿದ್ದರೂ ಸರ್ಕಾರಿ ಅಧಿಕಾರಿ ತನ್ನ ಕಾರ್ಯದರ್ಶಿಯ ಜೊತೆ ಸೆಕ್ಸ್ ಮಾಡಿರುವುದನ್ನು ಕಾಣಬಹುದಾಗಿದೆ.
ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮ ಸದಸ್ಯನ ವಿರುದ್ಧ ಕೆಲ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಆತನ ವಿರುದ್ಧ ದೂರು ದಾಖಲಿಸಿದ್ದಾರೆ.









