ಬೆಂಗಳೂರು : ಕೊರೊನಾಗೆ ನೀಡಿರುವ ಹಣದಲ್ಲೇ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರಿಗಾಗಿ 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಿದರು. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಯವರು ಈಗಾಗಲೇ 20 ಲಕ್ಷ ಕೋಟಿ ಯೋಜನೆ ಘೋಷಿಸಿದ್ದಾರೆ. ಆದರೆ ಆ 20 ಲಕ್ಷ ಕೋಟಿಯಲ್ಲಿ ಎಷ್ಟು ಜನರಿಗೆ ಸಿಕ್ಕಿದೆ ಎಂದರೆ ಇಲ್ಲಿಯವರೆಗೆ 75 ಸಾವಿರ ಮಾತ್ರ ಜನರಿಗೆ ತಲುಪಿದೆ ಎಂದು ಹೇಳಿದ್ದಾರೆ.
ನಮ್ಮ ಮುಂದೆ ಕೊರೊನಾ ಎಂಬ ಒಂದು ದೊಡ್ಡ ಸಮಸ್ಯೆ ಇದೆ. ಅದರ ಕಡೆ ಹೆಚ್ಚಿನ ಗಮನಹರಿಸಿದ್ದೇವೆ, ಎನ್ನುವ ಸರ್ಕಾರ ಕೊರೊನಾ ನೆಪದಲ್ಲಿ ಜನರಿಗೆ ಏನೇನೂ ಕೊಡ್ತಿಲ್ಲ. ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ, ಕಾರ್ಮಿಕರಿಗೆ ಸಮಸ್ಯೆಯಾಗಿದೆ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ ಆದರೆ ಯಾರೂ ಅದರ ಬಗ್ಗೆ ಮಾತನಾಡ್ತಿಲ್ಲ ಎಂದು ಖರ್ಗೆ ಕಿಡಿಕಾರಿದರು.
ಇನ್ನು ನಾನೇನು ಅವರಿಂದ ಹೆಚ್ಚಿನದನ್ನ ನಿರೀಕ್ಷಿಸಿಲ್ಲ, ಕೊರೊನಾಗೆ ನೀಡಿರೋ ಹಣದಲ್ಲೇ ದುರ್ಬಳಕೆಯಾಗಿದೆ. ನಮ್ಮ ಪಕ್ಷದ ನಾಯಕರು ಅದನ್ನ ಎತ್ತಿ ಹಿಡಿದಿದ್ದಾರೆ. ಪಬ್ಲಿಕ್ ಅಕೌಂಟ್ ಕಮಿಟಿ ಕೂಡ ಎತ್ತಿ ಹಿಡಿದಿದೆ. ಸಿಎಜಿ ಕೂಡ ಇದರ ಬಗ್ಗೆ ಕಣ್ಣಿಟ್ಟಿದೆ ನೋಡೋಣ ಏನೇನು ಮಾಡ್ತಾರೋ ಎಲ್ಲವನ್ನೂ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.








