ಬೆಂಗಳೂರು; ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರ ಸಂಬಳವನ್ನು 15 ಸಾವಿರ ಹೆಚ್ಚಳ ಮಾಡಿ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ವೇತನ ಹೆಚ್ಚಳ ಮಾಡಬೇಕು, ಇಲ್ಲವಾದರೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದೆ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆ ಎಂದು ವೈದ್ಯರು ಸರ್ಕಾರವನ್ನು ಎಚ್ಚರಿಸಿದ್ದರು. ಗುತ್ತಿಗೆ ವೈದ್ಯರ ಆಗ್ರಹಕ್ಕೆ ಮಣಿದಿರುವ ಸರ್ಕಾರ ಸಂಬಳವನ್ನು ಹೆಚ್ಚಳ ಮಾಡಿ ಆದೇಶ ನೀಡಿದೆ.
ಗ್ರಾಮೀಣ ಭಾಗದಲ್ಲಿ, ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಎಂಬಿಬಿಎಸ್ ವೈದ್ಯರ ವೇತನವನ್ನು 54 ಸಾವಿರಂದ 60 ಸಾವಿರದವರೆಗೆ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ತಿಂಗಳಿಗೆ 45 ಸಾವಿರ ವೇತನ ಪಡೆಯುತ್ತಿದ್ದ ಸರ್ಕಾರಿ ಗುತ್ತಿಗೆ ವೈದ್ಯರು ಇನ್ನು ಮುಂದೆ 60 ಸಾವಿರ ಸಂಬಳ ಪಡೆಯಲಿದ್ದಾರೆ.
ಆದರೆ, ವೈದ್ಯರ ವೇತನ ಹೆಚ್ಚಳ ಮಾಡಿರುವ ಸರ್ಕಾರ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಂಬಿಬಿಎಸ್ ವೈದ್ಯರನ್ನು ಖಾಯಂಗೊಳಿಸುವ ಬೇಡಿಕೆಗೆ ಮಣೆ ಹಾಕುವುದಿಲ್ಲ ಎಂಬ ಷರತ್ತು ವಿಧಿಸಿದೆ.
ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
ರಾಜ್ಯ ರಾಜಕಾರಣದಲ್ಲಿ ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿಯ ಆಂತರಿಕ ವಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಹೊಸ...








