ಬೆಂಗಳೂರು: ರಾಜೀನಾಮೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದ 508 ಗುತ್ತಿಗೆ ವೈದ್ಯರ ಖಾಯಂ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಷರತ್ತು ಬದ್ಧ ಒಪ್ಪಿಗೆ ಸಿಕ್ಕಿದೆ.
ಹೀಗಾಗಿ ಸೇವೆ ಖಾಯಂಗಾಗಿ ಹಲವು ವರ್ಷಗಳಿಂದ ಚಾತಕ ಪಕ್ಷಿಗಳಿಂದ ಕಾಯುತ್ತಿದ್ದ ಗುತ್ತಿಗೆ ವೈದ್ಯರಿಗೆ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಗುತ್ತಿಗೆ ವೈದ್ಯರ ನೇಮಕಾತಿ ಕುರಿತು ಚರ್ಚಿಸಲಾಗಿದೆ. ವೈದ್ಯರು ಸಲ್ಲಿಸಿರುವ ಸೇವಾ ಅವಧಿ ಆಧಾರದ ಮೇರೆಗೆ ಖಾಯಂ ಮಾಡಲಿದ್ದೇವೆ. ಪ್ರತಿ ಆರು ತಿಂಗಳು ಸೇವಾ ಅವಧಿಗೆ 2.5 ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಉದ್ದೇಶದಿಂದ ಕೃಪಾಂಕವನ್ನು 2.5 ರಿಂದ 30 ರವರೆಗೆ ನೀಡಲು ತೀರ್ಮಾನಿಸಲಾಗಿದೆ. 6 ತಿಂಗಳು ಸೇವೆ ಮಾಡಿದವರಿಗೆ 2.5 ಅಂಕ ಸಿಗುತ್ತದೆ. ಸೇವೆಯ ಕಾಲಾವಧಿ ಹೆಚ್ಚಾದಷ್ಟೂ ಕೃಪಾಂಕವೂ ಹೆಚ್ಚುತ್ತದೆ. ವಯೋಮಿತಿಯ ನಿಬರ್ಂಧವನ್ನು 21 ರಿಂದ 26 ವರ್ಷಗಳಿಗೆ ಏರಿಸಲಾಗಿದೆ. ಆಯುಷ್ ವೈದ್ಯರಿಗೂ ಇದು ಅನ್ವಯವಾಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಬಂಡವಾಳ ಹೂಡಲು ಅನುಕೂಲವಾಗುವಂತೆ ಮಧ್ಯವರ್ತಿಯಾಗಿ ಹಾಗೂ ಜ್ಞಾನಾಧಾರಿತ ಸಹಯೋಗಕ್ಕಾಗಿ ಖಾಸಗಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಯನ್ನು 12 ಕೋಟಿ ರೂ. 12 ತಿಂಗಳು ಮುಂದುವರೆಸಲು ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿದೆ.
ವಿದ್ಯುತ್ ಕಂಪನಿಗಳಿಗೆ ಬಡ್ಡಿ ರಹಿತ 2500 ಕೋಟಿ ರೂ. ಸಾಲ ಮಂಜೂರು ಮಾಡಲಾಗುವುದು. 200 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಪ್ರಾರಂಭಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೈ ಫೆÇ್ಲೀ ಆಕ್ಸಿಜನ್ ಸಿಸ್ಟಮ್, ಬೆಡ್ ವ್ಯವಸ್ಥೆಗೆ ಹಣ ಮಂಜೂರು, ಜಿಲ್ಲಾ ಆಸ್ಪತ್ರೆಗಳಿಗೆ 207 ಕೋಟಿ ರೂ. ಹಣ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ತುರ್ತು ಕೆಲಸಗಳಿಗೆ 95 ಕೋಟಿ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ನಟಿ ರನ್ಯಾ ಕೇಸ್: CID ತನಿಖೆ ಆದೇಶ ನೀಡಿದ ಸರ್ಕಾರ ದಿಢೀರ್ ಯೂ-ಟರ್ನ್
ನಟಿ ರನ್ಯಾ ರಾವ್ ಸಂಬಂಧಿಸಿದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ದಿಢೀರ್ ಯೂ-ಟರ್ನ್ ತೆಗೆದುಕೊಂಡಿದೆ. ಮೊನ್ನೆ ರಾತ್ರಿ CID ತನಿಖೆಗೆ ವಹಿಸುವಂತೆ ಆದೇಶ ನೀಡಿದ್ದ ಸರ್ಕಾರ,...