ಕರ್ನಾಟಕ ಬಂದ್ ವಾಪಸ್ ಪಡೆಯುವಂತೆ ಗೋವಿಂದ ರಾಜು ಮನವಿ Karnataka Bandh saaksha tv
ಕೋಲಾರ : ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಅನ್ನು ವಾಪಸ್ ಪಡೆಯುವಂತೆ ಎಂಎಲ್ ಸಿ ಗೋವಿಂದರಾಜು ಮನವಿ ಮಾಡಿಕೊಂಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವೀಡ್ ನಿಂದ ಇಡೀ ರಾಜ್ಯದ ಜನ ಈಗಾಗಲೇ ತತ್ತರಿಸಿದ್ದಾರೆ.
ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಪ್ಯೂ ಸಹ ಜಾರಿಯಲ್ಲಿದೆ. ಎಂ.ಇ.ಎಸ್ ನ ಪುಂಡಾಟಿಕೆ ಪ್ರತಿರೋದ ಮಾಡಲು ನಾನಾ ರೀತಿಯ ವಿಧಗಳಿವೆ.
ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಲು ಎಲ್ಲಾ ಶಾಸಕರುಗಳು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಮೊದಲು ನಿಲುವಳಿ ೫೯ ಅನ್ನು ಮಂಡನೆ ಮಾಡಿದ್ದು ಜೆಡಿಎಸ್ ಪಕ್ಷ, ಎಲ್ಲಾರೂ ಎಂ.ಇ.ಎಸ್ ಪುಂಡಾಟಿಕೆಯನ್ನ ಖಂಡಿಸಿದ್ದಾರೆ.
ದಯವಿಟ್ಟು ಬಂದ್ ಅನ್ನು ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡರು.
ಇನ್ನು ಬಂದ್ ನಿಂದಾಗಿ ಸಾರ್ವಜನಿಕರಿಗೆ, ವ್ಯಾಪರಸ್ಥರಿಗೆ ತೊಂದರೆ ಹಾಗುತ್ತೆ. ಸಹಜ ರೀತಿಯಿಂದ ಜೀವನ ನಡೆಸಿ ಎಂದು ಸಾರ್ವಜನಿಕರಿಗೆ ಹಾಗೂ ಕನ್ನಡ ಪರ ಸಂಘಟನೆಗಳಿಗೆ ಎಂಎಲ್ ಸಿ ಗೋವಿಂದ ರಾಜು ಮನವಿ ಮಾಡಿಕೊಂಡರು.