ನಿಷೇಧಿತ ಮತ್ತು ಹಳೆಯ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಬದಲಾವಣೆ 6 ಕೋಟಿ ವಶಕ್ಕೆ
ನಾವು ಹಳೇ ನೋಟು ಕೊಡ್ತಿವಿ ನಮಗೆ ಹೊಸ ನೋಟು ಕೊಡಿ, ಪರ್ಸೆಂಟೇಜ್ ಕಡಿಮೆ ಆದ್ರೂ ಪರ್ವಾಗಿಲ್ಲ’ ಎಂದು ನಕಲಿ ನೋಟುಗಳನ್ನ ಕೊಟ್ಟು ವಂಚನೆ ಮಾಡುತ್ತಿದ್ದ ಆರೋಪದಲ್ಲಿ ಗೋವಿಂದನಗರದ ಪೊಲೀಸರು 7 ಜನ ಆರೋಪಿಗಳನ್ನ ಬಂಧಿಸಿದ್ದಾರೆ.ಬಂಧಿತರಿಂದ ಆರು ಕೋಟಿ ನಕಲಿ ಮತ್ತು 70 ಲಕ್ಷ ರೂ ಮೌಲ್ಯದ ಅಸಲಿ ನೋಟುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲಿಗೆ 35 ಲಕ್ಷ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ 1 ಸಾವಿರ ಹಾಗೂ 500 ಮುಖಬೆಲೆಯ 70 ಲಕ್ಷ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದು ಆರೋಪಿಗಳ ಹೇಳಿಕೆ ಆಧರಿಸಿ ಕಾಸರಗೋಡಿಗೆ ಹೋದಾಗ ಅಲ್ಲಿ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಅಲ್ಲದೇ 16 ಮೂಟೆ ಪೇಪರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಯಾರು ಹಳೇ ನೋಟು ಪಡೆದು, ಹೊಸ ನೋಟು ಕೊಡ್ತಾರೋ ಅಂತವರಿಗೆ ಆರೋಪಿಗಳು ಗಾಳ ಹಾಕುತ್ತಿದ್ದರು. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ








