ಎಲ್.ಕೆ.ಜಿಯಿಂದ 10ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣಕ್ಕೆ ಸರ್ಕಾರ ಒಪ್ಪಿಗೆ
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಎಲ್.ಕೆ.ಜಿಯಿಂದ 10ನೇ ತರಗತಿಯವರೆಗೂ ಆನ್ ಲೈನ್ ಶಿಕ್ಷಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಎಲ್.ಕೆಜಿ ಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮಾರ್ಗ ಸೂಚಿಗಳನ್ನ ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯು ಅಂತಿಮ ಮಾರ್ಗಸೂಚಿ ನಿಯಮಾವಳಿ ಬರುವವರೆಗೆ ಮಾತ್ರ ಜಾರಿಯಲ್ಲಿರಲಿದೆ. ಆದರೆ ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, ಶುಲ್ಕ ಹೆಚ್ಚಳ ಮಾಡಿದರೆ ಸಹಾಯವಾಣಿಗೆ ದೂರು ನೀಡುವಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.
ಎಲ್.ಕೆಜಿ ಯಿಂದ ಯುಕೆಜಿ ತರಗತಿಯ ಮಕ್ಕಳಿಗೆ ಪೋಷಕರ ಮಾರ್ಗದರ್ಶನದೊಂದಿಗೆ ವಾರಕ್ಕೆ ಒಂದು ದಿನ 30 ನಿಮಿಷಗಳ ತರಗತಿ ನಡೆಸಬಹುದು.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ವಾರದಲ್ಲಿ ಮೂರು ದಿನ 30ರಿಂದ 44 ನಿಮಿಷಗಳ ಅವಧಿಗಳ 2 ಪೀರಿಯಡ್ ಅನ್ ಲೈನ್ ತರಗತಿ.
6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ ತಲಾ 30ರಿಂದ 44 ನಿಮಿಷಗಳ 2 ಅವಧಿಯ ತರಗತಿ.
9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ 30 ರಿಂದ 44 ನಿಮಿಷ 4 ಅನ್ ಲೈನ್ ಕ್ಲಾಸ್ ನಡೆಸಬಹುದು ಎಂದು ಸರ್ಕಾರ ಸೂಚಿಸಿದೆ.