ಬೆಂಗಳೂರು : ಬೆಂಗಳೂರಿನ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್ ,ಜೆಡಿಎಸ್, ಬಿಜೆಪಿ ಶಾಸಕರು ಭಾಗಿಯಾಗುತ್ತಾರೆ. ಹಾಗಾಗಿ ಸಭೆಗೆ ಆಗಮಿಸುವ ಮುನ್ನ ಕಾಂಗ್ರೆಸ್ ಶಾಸಕರು ಸಭೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಕಾಂಗ್ರೆಸ್ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸರ್ಕಾರ ಕರೆದ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವವನ್ನು ಸ್ಪಷ್ಟವಾಗಿ ಹೇಳಲು ಕೈ ತೀರ್ಮಾನ ಮಾಡಿದ್ದಾರೆ.
ಅಲ್ಲದ ಸರ್ಕಾರ ಕಿವಿ ಹಿಂಡಲು ಕೈ ನಾಯಕರು ತಯಾರಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೊದಲಿಂದಲೂ ಸರ್ವಪಕ್ಷ ಸಭೆ ಕರೆಯಿರಿ ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ ಸರ್ಕಾರ ಕಾಂಗ್ರೆಸ್ ಅಭಿಪ್ರಾಯವನ್ನು ಪರಿಗಣಿಸಿರಲಿಲ್ಲ. ಇದೀಗ ಸರ್ವಪಕ್ಷ ಸಭೆ ಸರ್ಕಾರ ಕರೆದಿದೆ. ಆದ್ದರಿಂದ ಪಡಿತರ ಕಿಟ್ ವಿತರಣೆಯಲ್ಲಿ ನಮ್ಮ ನೆನಪಾಗಲಿಲ್ವ? ಲಾಕ್ಡೌನ್ ಹೇರಿಕೆ ನಂತರ ಸಡಿಲಿಕೆ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಇರುವ ವಿಚಾರದಲ್ಲಿ ಬಿಜೆಪಿಯನ್ನು ಕೈ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.








