ಚೀನಾಗೆ ಶಾಕ್ ಕೊಟ್ಟ ಭಾರತ : ಚೀನಿಯರ ಪ್ರವೇಶಕ್ಕೆ ನಿರ್ಬಂಧ..!
ನವದೆಹಲಿ: ಚೀನಾಕೆ ಭಾರತ ಶಾಕ್ ಮೇಲೆ ಶಾಕ್ ನೀಡ್ತಿದೆ. ಟಿಕ್ ಟಾಕ್ , ಪಬ್ ಜೀ ಹೀಗೆ 150ಕ್ಕೂ ಹೆಚ್ಚು ಚೀನೀ ಆಪ್ ಗಳನ್ನ ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ರೆಡ್ ಡ್ರ್ಯಾಗನ್ ಗೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ಭಾರತಕ್ಕೆ ಚೀನಿಯರ ಪ್ರವೇಶಕ್ಕೆ ಬ್ರೇಕ್ ಹಾಕಿದೆ.
ಚೀನಾ ಪ್ರಜೆಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಅನೌಪಚಾರಿಕವಾಗಿ ಹಾರಾಡುವುದನ್ನ ನಿಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಚೀನಾಕ್ಕೆ ತೆರಳುವ ಭಾರತೀಯರಿಗೆ ಚೀನಾ ಸರ್ಕಾರ ತಡೆಯೊಡ್ಡಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಚೀನಾ ನಡುವಿನ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಿದ್ದರೂ, ಚೀನೀ ಪ್ರಜೆಗಳು ವಿದೇಶಿಯರಿಗೆ ಪ್ರಸ್ತುತ ನಿಯಮಗಳ ಪ್ರಕಾರ ಭಾರತಕ್ಕೆ ಪ್ರಯಾಣಿಸಲು ಅರ್ಹರಾಗಿರುತ್ತಾರೆ.
ಅಫ್ಘಾನ್ ವಾಯುಪಡೆ ವೈಮಾನಿಕ ದಾಳಿ : 13 ಉಗ್ರರು ಸಾವು
ಭಾರತಕ್ಕೆ ಪ್ರವಾಸಿ ವೀಸಾಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ವಿದೇಶಿಯರು ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ಭಾರತಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 1,500 ಭಾರತೀಯ ನಾವಿಕರು ವಿವಿಧ ಚೀನಾದ ಬಂದರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದ್ರೆ ಚೀನಾ ಸಮುದ್ರ ತೀರದಲ್ಲಿ ದೋಣಿಗಳನ್ನ ಬಿಡಲು , ಹಡಗುಗಳನ್ನು ಬದಲಾಯಿಸಲು ಅಲ್ಲಿನ ಸರ್ಕಾರ ನಿರಾಕರಿಸುತ್ತಿವೆ. ಹೀಗಾಗಿ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








