ಗೌಳಿ ಟೀಸರ್ : ವಿಭಿನ್ನ ಅವತಾರದಲ್ಲಿ ಕಿಟ್ಟಿ ಕಂಬ್ಯಾಕ್ …
ಕನ್ನಡ ಚಿತ್ರರಂಗದಿಂದ ಕೆಲ ವರ್ಷಗಳ ಕಾಲ ಕಾಣೆಯಾಗಿದ್ದ ಶ್ರೀನಗರ ಕಿಟ್ಟಿ ಈಗ ಮತ್ತೊಮ್ಮೆ ಕಂಬ್ಯಾಕ್ ಮಾಡಿದ್ದಾರೆ. ಹಿಂದಿನಂತೆ ಲವರ್ ಬಾಯ್ ಅವತಾರವನ್ನ ತಾಳದೆ, ಭಯಾನಕ ಪಾತ್ರದಲ್ಲಿ ಈ ಭಾರಿ ಕಾಣಿಸಿಕೊಂಡಿದ್ದಾರೆ. 2017 ತೆರೆಕಂಡಿದ್ದ ಸಿಲಿಕಾನ್ ಸಿಟಿ ಚಿತ್ರದ ನಂತರ ಶ್ರೀನಗರ ಕಿಟ್ಟಿ ಕಣ್ಮರೆಯಾಗಿದ್ದರು, ಈಗ “ಗೌಳಿ” ಎನ್ನುವ ವಿಭಿನ್ನ ಸಿನಿಮಾ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಿಟ್ಟಿ ಅಭಿನಯದ ಹೊಸ ಚಿತ್ರ ಗೌಳಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ, ಸ್ನೇಹಿತರಾದ ಗೋಲ್ಡನ್ ಸ್ಟಾರ್ ಗಣೇಶ್ ದುನಿಯಾ ವಿಜಯ್ ನೆನಪಿರಲಿ ಪ್ರೇಮ್ ಹಾಗು ಹಲವರು ಟೀಸರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ.
ಗೌಳಿ ಚಿತ್ರವು ನೈಜ ಕಥೆ ಆಧಾರಿತ ಚಿತ್ರ ಎಂದು ಹೇಳಲಾಗುತ್ತಿದೆ. ಗೌಳಿ ಸಮುದಾಯವನ್ನ ಸ್ಪೂರ್ತಿಯಾಗಿ ಪಡೆದು ಚಿತ್ರ ನಿರ್ಮಿಸಿದ್ದಾರೆ ಎನ್ನುವುದು ಟೀಸರ್ ನಲ್ಲಿ ಕಾಣಬಹುದು. ಇಷ್ಟು ದಿನ ಮುದ್ದು ಮುಖ ಇಟ್ಟುಕೊಂಡು ನಟಿಸುತ್ತಿದ್ದ ಕಿಟ್ಟಿ ಈಗ ಗಡ್ಡ ಜಡೆ ಬಿಟ್ಟು ನೊಡುವವರಿಗೆ ಭಯವಾಗವಂತಹ ರೀತಿ ಕಾಣಿಸಿಕೊಂಡಿದ್ದಾರೆ.
ರಾ ಅಂಡ್ ರಸ್ಟಿಕ್ ಸಂಭಾಷಣೆಗಳು ಅಕ್ಷನ್ ದೃಶ್ಯಗಳು ಟೀಸರ್ ನೋಡಿದವರಿಗೆ ಸಿನಿಮಾ ಮೇಲೆ ಭರವಸೆ ಮೂಡುವಂತೆ ಮಾಡುತ್ತವೆ. ಇಲ್ಲಿಯವರೆಗೂ ಕಾಣಿಸಿಕೊಳ್ಳದಂತಹ ಸಂಪೂರ್ಣ ಬಿನ್ನ ಪಾತ್ರದಲ್ಲಿ ಕಿಟ್ಟಿ ಕಾಣಿಸಿಕೊಂಡಿರುವುದು ಪಕ್ಕಾ.
ಗೌಳಿ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಯ ಜೊತೆಗೆ ರಂಗಾಯಣ ರಘು ಶರತ್ ಲೋಹಿತಾಶ್ವ, ಪಾವನಾ ಗೌಡ, ಯಶ್ ಶೆಟ್ಟಿ ಸುಧಿ ಗೋವಿಂದೇ ಗೌಡ ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾಗೆ ಸೂರ ಎಂಬುವವರು ಆಕ್ಷನ್ ಕಟ್ ಹೇಳಿದ್ದು ರಘು ಸಿಂಘಂ ನಿರ್ಮಾಣ ಮಾಡಿದ್ದಾರೆ. ಶಶಾಂತ್ ಶೇಷಗಿರಿ ಸಂಗೀತ ಸಂದೀಪ್ ವಲ್ಲುರಿ ಸಿನಿಮಾಟೋಗ್ರಾಫಿ ಇದೆ.