ಯಾದಗಿರಿ: ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ಗೆ ನೆರೆಯ ಶತೃರಾಷ್ಟ್ರ ಪಾಕಿಸ್ತಾನದಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಗೌರಿ ಲಂಕೇಶ್ ಬದುಕಿದ್ದಾಗ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗಸ್ವಾಮೀಜಿ ಬಾಂಬ್ ಸಿಡಿಸಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲವ್ ಜಿಹಾದ್ ಮಾದರಿಯಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಗೌರಿ ಲಂಕೇಶ್ ಸಾವಿಗೂ ಮೊದಲು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ರೆ ಕೊಡ್ತೇವೆ. ನಾವು ಸಾಕ್ಷಿ ಸಂಗ್ರಹ ಮಾಡುತ್ತಿದ್ದೆವು. ಅಷ್ಟರಲ್ಲಿ ಅವರು ಮೃತಪಟ್ಟರು ಎಂದು ಆಂದೋಲ ಶ್ರೀ ಹೇಳಿದ್ದಾರೆ.
ಡ್ರಗ್ಸ್ ವಿಚಾರದಲ್ಲಿ ಇಂದ್ರಜಿತ್ಗೂ, ಗೌರಿ ಲಂಕೇಶ್ಗೂ ಮನಸ್ತಾಪ ಇತ್ತು. ಗೌರಿ ಲಂಕೇಶ್ ಬದುಕಿದ್ದಾಗ ಇಂದ್ರಜಿತ್ ಅವರ ಜೊತೆಗೆ ಇರಲಿಲ್ಲ. ಈಗ ಜ್ಞಾನೋದಯವಾಗಿದೆ. ಇಂದ್ರಜಿತ್ ಮೊದಲು ತಮ್ಮ ಮನೆ ಸರಿ ಮಾಡಿಕೊಂಡು ಸಮಾಜ ತಿದ್ದಲು ಮುಂದಾಗಲಿ ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಮುಸ್ಲಿಂ ರಾಷ್ಟ್ರಗಳು ಡ್ರಗ್ಸ್ ಮೂಲಕ ಜಿಹಾದ್ ಮಾಡುತ್ತಿವೆ. ಡ್ರಗ್ಸ್ ಹಣ ಮೂಲಕ ಭಾರತದ ವಿರುದ್ಧ ಪರೋಕ್ಷ ಸಮರ ನಡೆಸಲು ಮುಸ್ಲಿಂ ರಾಷ್ಟ್ರಗಳ ಹುನ್ನಾರ ಎಂದು ಆಂದೋಲ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.








