ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿದ ಗ್ರೇಡ್ 2 ತಹಶೀಲ್ದಾರ್
ಚಿಕ್ಕೋಡಿ: ವಿಧವಾ ವೇತನ ಕೇಳಲು ಬಂದ ಮಹಿಳೆ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ತನ್ನ ಮಮಾರ್ಂಗವನ್ನು ತೋರಿಸಿ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಡಿ.ಎಸ್. ಜಮಾದಾರ ವಿರುದ್ಧ ಆರೋಪ ಕೇಳಿಬಂದಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ತಾಲೂಕಿನ ಅಂಕಲಿ ಗ್ರಾಮದ ಮಹಿಳೆಯ ಪತಿ ಕೆಲ ದಿನಗಳಿಂದೆ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದ್ದಿದ್ದರು. ಹೀಗಾಗಿ ತಾಯಿಗೆ ವಿಧವಾ ವೇತನ ಮಂಜೂರು ಮಾಡಿಸಲು ಆಕೆಯ ಮಗ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಬಳಿ ಅಲೆದಾಡುತ್ತಿದ್ದರು.
ಇದನ್ನು ಗಮನಿಸಿದ ಗ್ರೇಡ್ 2 ತಹಶೀಲ್ದಾರ್ ಜಮಾದಾರ ಎಂಬಾತ ನೀನೇಕೆ ಕಚೇರಿಗೆ ಬರುತ್ತಿರುವೆ, ನಿನ್ನ ತಾಯಿಯನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದಾನೆ. ಅದರಂತೆ ಇಂದು ಯುವಕ ತನ್ನ ಜೊತೆ ತಾಯಿಯನ್ನು ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಆ ಅಧಿಕಾರಿ ಮಗನನ್ನು ಹೊರಗೆ ನಿಲ್ಲಿಸಿ ತಾಯಿಯನ್ನು ಮಾತ್ರ ಕಳಿಸಲು ಹೇಳಿದ್ದಾನೆ. ಏಕಾಂಗಿಯಾಗಿದ್ದ ವಿಧವಾ ವೇತನ ಕೇಳಲು ಬಂದ ವಿಧವೆ ಎದುರು ಪ್ಯಾಂಟ್ ಕಳೆದ ಕಾಮುಕ ತನ್ನ ವಿಕೃತಿಯನ್ನು ಪ್ರದರ್ಶನ ಮಾಡುವುದರ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಾನೆ.
ಕಾಮುಕ ಅಧಿಕಾರಿಯ ವರ್ತನೆಯಿಂದ ರೊಚ್ಚಿಗೆದ್ದ ಆಕೆ ಚೀರುತ್ತಾ ಹೊರ ಬಂದಿದ್ದಾರೆ. ಬಳಿಕ ಮಗನೊಂದಿಗೆ ಕಚೇರಿಗೆ ನುಗ್ಗಿ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಚಿಕ್ಕೋಡಿ ತಹಶೀಲ್ದಾರ್, ಪ್ರೀತಂ ಜೈನ್ ಗೆ ದೂರು ನೀಡಿದ್ದು, ಅವರು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.