ವಿರಾಟ್ ನೇತೃತ್ವದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ಬೆಳವಣಿಗೆ ಕಂಡಿದೆ – ಗ್ರೇಮ್ ಸ್ಮಿತ್
ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟ್ ಆಟಗಾರ ಗ್ರೇಮ್ ಸ್ಮಿತ್, ವಿರಾಟ್ ಕೊಹ್ಲಿ ನಾಯಕತ್ವ ಕೌಶಲ್ಯವನ್ನು ಹೊಗಳಿದ್ದಾರೆ. ಮಾಜಿ ನಾಯಕ ಕೊಹ್ಲಿ ನೇತೃತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಬೆಳವಣಿಗೆ ಕಂಡಿದೆ ಎಂದು ಸ್ಮಿತ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಹಲವಾರು ಸ್ಮರಣೀಯ ಟೆಸ್ಟ್ ಗೆಲುವುಗಳ ಜೊತೆಗೆ ಭಾರತವನ್ನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಕರೆದೊಯ್ದರು.
ಈ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ನ ಅಭಿವೃದ್ಧಿಗೆ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಕೊಡುಗೆ ನೀಡುತ್ತಿವೆ ಎಂದು ಸ್ಮಿತ್ ಭಾವಿಸಿದ್ದಾರೆ. ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನ ಮೂರನೇ ದಿನದಂದು ‘ಸ್ಕೈ ಸ್ಪೋರ್ಟ್ಸ್’ ನಲ್ಲಿ ಸ್ಮಿತ್ ಈ ಮಾತುಗಳನ್ನ ಹೇಳಿದ್ದಾರೆ.
ಕೊಹ್ಲಿ ಸುದೀರ್ಘ ಆಟದ ಧ್ವಜಧಾರಿಯಾಗಿದ್ದಾರೆ, ಈತನ ನೇತೃತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದೆ ಎಂದು 41 ವರ್ಷ ವಯಸ್ಸಿನ ಗ್ರೇಮ್ ಸ್ಮಿತ್ ಅಭಿಪ್ರಾಯ ಪಟ್ಟಿದ್ದಾರೆ.