ಅಡ್ವಾನ್ಸ್ ತಗೊಂಡು ಸಾಕ್ಷಿ ಸಹಿ ಹಾಕಿಸಿಕೊಂಡು ಗ್ರಾಮಸ್ಥರು
ಚಿತ್ರದುರ್ಗ: ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಒಂದು ವಾರ ಬಾಕಿ ಇದ್ದು, ಗ್ರಾಪಂ ಸ್ಥಾನಗಳ ಮಾತ್ರ ಮುಗಿದಿಲ್ಲ. ಕಲಬುರಗಿ, ಬಳ್ಳಾರಿ, ಮಂಡ್ಯದ ಬಳಿಕ ಈ ಚಾಳಿ ಚಿತ್ರದುರ್ಗಕ್ಕೂ ವಕ್ಕರಿಸಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕಾಲುವೆ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಹರಾಜು ಹಾಕಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ನಾಲ್ಕು ಸದಸ್ಯ ಸ್ಥಾನಗಳ ಪೈಕಿ 3 ಸ್ಥಾನಗಳನ್ನು 3.5 ಲಕ್ಷ ಹಾಗೂ ಮತ್ತೊಂದು ಸ್ಥಾನವನ್ನು 7.5 ಲಕ್ಷಕ್ಕೆ ಹರಾಜು ಮಾಡಲಾಗಿದೆ.
ಭೀಮಣ್ಣ, ಬೊಮ್ಮಜ್ಜ, ಲಕ್ಷ್ಮಿದೇವಿ, ಶಾಂತಮ್ಮ ಅವಿರೊಧ ಆಯ್ಕೆಗೆ ಗ್ರಾಮಸ್ಥರು ಹರಾಜಿನ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ ತೀವ್ರ ಸ್ಪರ್ಧೆ ಇರುವ ಸ್ಥಾನವನ್ನು ಬರೋಬ್ಬರಿ 7.5 ಲಕ್ಷಕ್ಕೆ ಹರಾಜು ಮಾಡಲಾಗಿದೆ. ಕೇವಲ ಗ್ರಾಪಂ ಸ್ಥಾನಗಳನ್ನು ಹರಾಜು ಹಾಕಿದ್ದು ಮಾತ್ರವಲ್ಲದೆ ಆಕಾಂಕ್ಷಿಗಳಿಂದ 50 ಸಾವಿರ ರೂ. ಅಡ್ವಾನ್ಸ್ ಹಣ ತೆಗೆದುಕೊಂಡು ಸಹಿ ಹಾಕಿಸಿಕೊಂಡಿದ್ದಾರೆ. ಗ್ರಾಮದ ದೇವಸ್ಥಾನ ಮುಂಭಾಗ ಮುಖಂಡರು ಹರಾಜು ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.

ಅಷ್ಟೇ ಅಲ್ಲದೇ ಹರಾಜು ಪ್ರಕ್ರಿಯೆಯನ್ನ ಪುಸ್ತಕದಲ್ಲಿ ದಾಖಲಿಸಿದ ಗ್ರಾಮಸ್ಥರು ಸಾಕ್ಷಿಗಾಗಿ ಸಹಿ ಹಾಕಿದ್ದಾರೆ. ಇಲ್ಲಿ ಹರಾಜು ಕೂಗಿದ ಆಕಾಂಕ್ಷಿಗಳು ಬೇರೆ ಗ್ರಾಮದಲ್ಲಿ ನಾಮಪತ್ರ ಪತ್ರ ಸಲ್ಲಿಸದಂತೆ ಮುಖಂಡರು ತಾಕೀತು ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







