ಮಂಡ್ಯ: ಸಂತೆಯಲ್ಲಿ ಮೇಕೆ-ಕುರಿಗಳನ್ನು ಹರಾಜು ಕೂಗುವ ರೀತಿ ಗ್ರಾಮ ಪಂಚಾಯಿತಿ ಸ್ಥಾನಗಳಿಗಳನ್ನ ಗ್ರಾಮಸ್ಥರೇ ಹರಾಜು ಕೂಗಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಕಲಬುರಗಿ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಹರಾಜು ಹಾಕಲಾಗಿತ್ತು. ಈ ಘಟನೆಗಳ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾನೆ ಸದ್ದು ಮಾಡುತ್ತಿದ್ದು, ಇಷ್ಟು ದಿನ ಗೌಪ್ಯವಾಗಿ ನಡೆಯುತ್ತಿದ್ದ ಹರಾಜು ಪ್ರಕ್ರಿಯೆ ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ದಿನಕ್ಕೊಂದು ಗ್ರಾಮ ಪಂಚಾಯಿತಿ ಸ್ಥಾನಗಳ ಹರಾಜು ಬೆಳಕಿಗೆ ಬರುತ್ತಿದೆ.

ಅದೇ ರೀತಿ ಲಾಳಗೆರೆ ಗ್ರಾಮಪಂಚಾಯ್ತಿ ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಗ್ರಾಮದಲ್ಲಿ ಚುನಾವಣೆ ನಡೆಸಬಾರದು, ಅವಿರೋಧವಾಗಿ ಆಯ್ಕೆ ಮಾಡೋಣ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಅದರಂತೆ ಅವಿರೋಧವಾಗಿ ಆಯ್ಕೆಯಾಗುವ ಸ್ಥಾನಗಳಿಗೆ ಕುರಿ, ಮೇಕೆಗಳನ್ನ ಹರಾಜು ಕೂಗುವ ರೀತಿ ಪ್ರತಿ ಸ್ಥಾನಕ್ಕೂ ಲಕ್ಷ ಲಕ್ಷ ರೂಗಳಿಗೆ ಬಿಡ್ ಕೂಗಿದ್ದಾರೆ.
ಗ್ರಾಮದ ಮನೆಯೊಂದರಲ್ಲಿ ಗ್ರಾಮಸ್ಥರೇ ಕುಳಿತು ಈ ಹರಾಜು ಪ್ರಕ್ರಿಯೆ ಮಾಡಿದ್ದಾರೆ. ಅಲ್ಲದೆ ಅವಿರೋಧವಾಗಿ ಆಯ್ಕೆ ಆಗಬಯಸುವ ಆಕಾಂಕ್ಷಿಗಳು ಕೂಡ ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








