ಭಾರತ-ಪಾಕಿಸ್ತಾನದ ಗಡಿ ಭಾಗಗಳಲ್ಲಿ ಜೂನ್ ಆಂರಭಕ್ಕೂ ಮುನ್ನಾ ಮಿಡತೆಗಳು ದಾಳಿ ಮಾಡುವುದರ ಬಗ್ಗೆ ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.
ಭಾರತದ ಸುಮಾರು ಎರಡು ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮುಂಗಾರು ಆರಂಭಕ್ಕಿಂತ ಮೊದಲು ಮಿಡತೆಗಳ ಹಾವಳಿ ಕಾಣಿಸಿಕೊಳ್ಳಲಿದ್ದು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ..
ರಾಜತಾಂತ್ರಿಕವಾಗಿ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಟ್ಟಿದೆ..ಈ ನಡುವೆ ಮಿಡತೆಗಳಿಂದಾಗಿ ಎರಡೂ ದೇಶದ ಗಡಿ ಭಾಗದಲ್ಲಿರುವ ಹೊಲಗಳ ಬೆಳೆಗಳು ನಾಶವಾಗುತ್ತಿದೆ.. ಈ ಕಾರಣದಿಂದಾಗಿ ಸ್ಥಳೀಯ ಆಡಳಿತದ ಮಟ್ಟದಲ್ಲಿ ಮಿಡತೆಗಳ ಹಾವಳಿ ನಿಯಂತ್ರಿಸುವು ದರ ಬಗ್ಗೆ ಐದು ಸಭೆಗಳು ನಡೆದಿದ್ದು.. ಮಿಡತೆಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದೆ..








