ನವೆಂಬರ್ ತಿಂಗಳಾಂತ್ಯದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಡಿಸೆಂಬರ್ ಮೊದಲ ವಾರದಲ್ಲಿ ಭಾರಿ ಇಳಿಕೆ ಕಂಡಿದೆ. ಸೋಮವಾರ ಚಿನ್ನದ ದರ 650 ರೂ ಇಳಿಕೆ ಕಂಡಿದೆ. ಕಳೆದ ಶುಕ್ರವಾರ ಚಿನ್ನದ ದರ 760 ರೂ ಏರಿಕೆಯಾಗಿದ್ದರೆ, ಇಂದು 650 ರೂ ಇಳಿಕೆಯಾಗಿದೆ.
ಶುದ್ಧತೆ: ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ ₹65 ರೂ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರದಲ್ಲಿ ₹60 ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ ₹49 ರೂ ಇಳಿಕೆಯಾಗಿದೆ.
ಬೆಂಗಳೂರು ದರಗಳು: ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ ₹600 ಇಳಿಕೆಯಾಗಿ ₹70,900 ತಲುಪಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ ₹490 ಇಳಿಕೆಯಾಗಿ ₹58,010 ತಲುಪಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 77,350 ರೂಪಾಯಿಗೆ ಇಳಿಕೆ ಕಂಡಿದೆ








