FAF | ಮುಂದಿನ ಬಾರಿ ಸ್ಟ್ರಾಂಗ್ ಕಂ ಬ್ಯಾಕ್ ಮಾಡೋಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2 ರಲ್ಲಿ ಸೋತು ನಿರಾಸೆ ಅನುಭವಿಸಿದೆ..
ಆರ್ ಸಿಬಿ ಮೇಲೆ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಗುಜರಾತ್ ವಿರುದ್ಧ ಪೈನಲ್ ನಲ್ಲಿ ಗುದ್ದಾಟ ನಡೆಸುತ್ತಿದೆ. ರೆಡ್ ಅಂಡ್ ಗೋಲ್ಡ್ ಆರ್ಮಿ ಈ ಬಾರಿಯೂ ಪ್ರಶಸ್ತಿ ಗೆಲ್ಲದೇ ಮನೆಯತ್ತ ಹೊರಟಿದೆ.
ಈ ಹಿನ್ನೆಲೆಯಲ್ಲಿ ಆರ್ ಸಿಬಿಯ ನಾಯಕ ಫಾಫ್ ಡುಪ್ಲಸಿಸ್ ಆಟಗಾರರನ್ನುದ್ದೇಶಿಸಿ ಮಾತನಾಡಿ ಧನ್ಯವಾದ ತಿಳಿಸಿದ್ದಾರೆ.
ಆರ್ ಸಿಬಿಯ ಬಯೋಬಬಲ್ ನಲ್ಲಿ ಆಟಗಾರರನ್ನು ಉದ್ದೇಸಿಶಿ ಫಾಫ್, ಈ ಸೀಸನ್ ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ.

ಇದಕ್ಕೆ ಸಹಕರಿಸಿದ ಎಲ್ಲಾ ಆಟಗಾರರಿಗೂ ಧನ್ಯವಾದ. ನಾವು ಮುಂದಿನ ಸೀಸನ್ ನಲ್ಲಿ ಮತ್ತಷ್ಟ ಬಲಿಷ್ಠವಾಗಿ ಕಂ ಬ್ಯಾಕ್ ಮಾಡೋಣ ಎಂದಿದ್ದಾರೆ.
ಅಲ್ಲದೇ ಇದೇ ವೇಳೆ ಫಾಫ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ ಮೆಂಟ್ ಗೂ ಧನ್ಯವಾದ ತಿಳಿಸಿದ್ದಾರೆ.
ಅಂದಹಾಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇದೇ ಮೊದಲ ಬಾರಿಗೆ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಫಾಫ್, ಬೆಂಗಳೂರು ತಂಡವನ್ನು ಉತ್ತಮವಾಗಿ ಮುನ್ನಡೆಸಿದರು.
ಲೀಗ್ ಹಂತದಲ್ಲಿ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಅಲ್ಲದೇ ಪ್ಲೇ ಆಫ್ಸ್ ಪ್ರವೇಶಿಸಿ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು, ಕ್ವಾಲಿಫೈಯರ್ ಹಂತಕ್ಕೆ ತಲುಪಿದ್ದರು.








