CRPF ಪಡೆ ಮೇಲೆ ಗ್ರೆನೇಡ್ ದಾಳಿ Saaksha Tv
ಜಮ್ಮು ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೀಗಾಮ್ ಗ್ರಾಮದಲ್ಲಿ ಉಗ್ರರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ ಮೇಲೆ ಗ್ರೆನೇಡ್ ಎಸೆದಿದ್ದಾರೆ.
ಗುರುವಾರ ರಾತ್ರಿ 7:30 ರ ಸುಮಾರಿಗೆ ಉಗ್ರರು ಕೀಗಾಮ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯತ್ತ ಗ್ರೆನೇಡ್ ಎಸೆದಿದ್ದಾರೆ. ಗ್ರೆನೇಡ್ ಜಿಪ್ಸಿಯಲ್ಲಿ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ. ದಾಳಿಕೋರರನ್ನು ಹಿಡಿಯಲು ಆ ಪ್ರದೇಶವನ್ನು ಸೇನಾ ಪಡೆ ಸುತ್ತುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಬಾರಾಮುಲ್ಲಾ ಜಿಲ್ಲೆಯ ಜಂಡ್‌ಫರಾನ್ ಪ್ರದೇಶದಲ್ಲಿ ಪೊಲೀಸರು ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಝಂಡ್‌ಫರಾನ್ ಪ್ರದೇಶದಲ್ಲಿ ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. 10 ಹ್ಯಾಂಡ್ ಗ್ರೆನೇಡ್‌ಗಳು 10 ಯುಬಿಜಿಎಲ್, ಕಚ್ಚಾ ಗ್ರೆನೇಡ್ ಮತ್ತು ಇತರ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.









