ಬಿಜೆಪಿ ನಾಯಕನ ಮನೆ ಮೇಲೆ ಗ್ರೆನೇಡ್ ದಾಳಿ – 4 ವರ್ಷದ ಬಾಲಕ ಸಾವು
ಬಿಜೆಪಿ ನಾಯಕನ ಮನೆ ಮೇಲೆ ಕೆಲ ದುಷ್ಕರ್ಮಿಗಳು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ 44 ವರ್ಷದ ಬಾಲಕ ಮೃತಪಟ್ಟಿರುವ ಅಮಾನುಷ ಘಟನೆ ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡನ ಮನೆ ಮೇಲೆ ನಡೆಸಲಾದ ದಾಳಿಯಲ್ಲಿ 4 ವರ್ಷದ ಬಾಲಕ ಮೃತಪಟ್ಟಿದ್ರೆ , ಮನೆಯ 7 ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ವರದಿಗಳ ಪ್ರಕಾರ ಖಾಂಡ್ಲಿ ಪ್ರದೇಶದಲ್ಲಿರುವ ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ಅವರ ಮನೆಯ ಮೇಲೆ ಗುರುವಾರ ಅಪರಿಚಿತ ದಾಳಿಕೋರರು ಬಾಂಬ್ ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕನ ಮನೆಯ ಮೇಲೆ ನಡೆದ ದಾಳಿಯಲ್ಲಿ ಜಸ್ಬೀರ್ ಸಿಂಗ್ ಅವರ ಸೋದರಳಿಯ ವೀರ್ ಎಂಬ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಗುರುವಾರ ಮಧ್ಯರಾತ್ರಿ ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮಗು ವೀರ್ ಸಾವನ್ನಪ್ಪಿದ್ದಾನೆ. ಅಂತಿಮ ಸಂಸ್ಕಾರಕ್ಕಾಗಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಎಡಿಜಿಪಿ ಕುಟುಂಬವು ಟೆರೇಸ್‌ನಲ್ಲಿದ್ದಾಗ ರಾಜೌರಿಯ ಖಾಂಡ್ಲಿ ಪ್ರದೇಶದಲ್ಲಿ ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ಅವರ ಮನೆಯ ಮೇಲೆ ಅಪರಿಚಿತರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (PAFF) ಭಯೋತ್ಪಾದಕ ದಾಳಿಯ ಹೊಣೆ ಹೊತ್ತಿದೆ ಎಂದು ವರದಿಯಾಗಿದೆ. ಮನೆಯು ಹಾನಿಗೊಳಗಾಗಿದೆ. ವರದಿಗಳ ಪ್ರಕಾರ, ಇನ್ನೊಂದು 7 ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎನ್ನಲಾಗಿದೆ. ಜಸ್ಬೀರ್ ಸಿಂಗ್ ನಿವಾಸದ ಮೇಲೆ ಗ್ರೆನೇಡ್ ದಾಳಿಯ ನಂತರ ರಾಜೌರಿಯಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.. ಇನ್ನೂ ಬಿಜೆಪಿಯು ಈ ದಾಳಿಯನ್ನ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದೆ.








