ನದಿಗೆ ಉರುಳಿ ಬಿದ್ದ ಕಾರು, ಮದುವೆ ವರ ಸೇರಿ 9 ಮಂದಿ ಸಾವು…
ಮದುವೆಗೆಂದು ಹೊರಟಿದ್ದ ಕಾರು ಚಂಬಲ್ ನದಿಗೆ ಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೊಟದಲ್ಲಿ ನಡಿದಿದೆ. ಘಟನೆಯಲ್ಲಿ ಮದುವೆಯಾಗಬೇಕಿದ್ದ ವರನೂ ಮೃತಪಟ್ಟಿದ್ದಾನೆ. ಪೊಲಿಸರು ಸ್ಥಳಕ್ಕೆ ಧಾವಿಸಿದ್ದು ಮೃತರನ್ನ ನದಿಯಿಂದ ಮೇಲೆತ್ತುವ ಕಾರ್ಯಚರಣೆ ನಡೆಯುತ್ತಿದೆ.
ವರನ ಕಡೆಯವರು ಬೆಳಿಗ್ಗೆ 5.30 ಕ್ಕೆ ಸವಾಯಿ ಮಾಧೋಪುರದಿಂದ ಹೊರಟು ಉಜ್ಜಯಿನಿ (ಮಧ್ಯಪ್ರದೇಶ) ಹೊರಟಿದ್ದರು. ಇದೇ ವೇಳೆ ಕೋಟಾದ ನಯಾಪುರದ ಬಳಿ ಕಾರು ಚಂಬಲ್ ನದಿಗೆ ಬಿದ್ದಿದೆ. ಕಾರಿನಲ್ಲಿದ್ದವರು ಗಾಜನ್ನು ತೆರೆಯಲು ಪ್ರಯತ್ನಿಸಿದ್ದರಾದರೂ ಒಂದು ಗ್ಲಾಸ್ ಮಾತ್ರ ತೆರೆಯಲು ಸಾಧ್ಯವಾಗಿದೆ. ಇದರಿಂದಾಗಿ ಕಾರಿನಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಉಳಿದ 2 ಜನರ ಶವವು ನದಿಯಲ್ಲಿ ತೇಲಿ ಹೋಗಿದೆ. ಬೆಳಗ್ಗೆ ಸ್ಥಳೀಯರು ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪರಿಹಾರ ಕಾರ್ಯ ಆರಂಭಿಸಲಾಗಿದೆ.
ಪೊಲೀಸ್ ಡೈವಿಂಗ್ ತಂಡ ಇದುವರೆಗೆ 9 ಮೃತದೇಹಗಳನ್ನು ಹೊರತೆಗೆದಿದೆ. ಕಾರಿನಲ್ಲಿ ಬೇರೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ಪೊಲೀಸ್ ತಂಡ ಇನ್ನೂ ತನಿಖೆ ನಡೆಸುತ್ತಿದೆ. ಮೃತ ದೇಹಗಳನ್ನು ಎಂಬಿಎಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. Groom, 8 others killed after car falls into Chambal river in Rajasthan
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ, “ಮದುವೆ ವರ ಸೇರಿದಂತೆ 9 ಜನರು ಪ್ರಯಾಣಿಸುತ್ತಿದ್ದ ಕಾರು ಚಂಬಲ್ ನದಿಗೆ ಬಿದ್ದು ಮೃತಪಟ್ಟಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ಘಟನೆಯ ಬಗ್ಗೆ ನಾನು ಜಿಲ್ಲಾಧಿಕಾರಿಯನ್ನು ವಿಚಾರಿಸಿದ್ದೇನೆ. ನನ್ನ ತೀವ್ರ ಸಂತಾಪಗಳು. ದುಃಖತಪ್ತ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ, ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ”. ಎಂದು ಟ್ವಿಟ್ ಮಾಡಿದ್ದಾರೆ..








