ಮದುವೆಗೆ ಇನ್ನೇನು ಕೆಲವೇ ಕ್ಷಣಗಳಿರುವಾಗಲೇ ವರನ ಮೊಬೈಲ್ ಗೆ ಬಂತು ವಧುವಿನ ನಗ್ನ ಫೋಟೋಗಳು..!
ಅದ್ಧೂರಿಯಾಗಿ ನೆರವೇರುತ್ತಿದ್ದ ಮದುವೆ ಸಮಾರಂಭದಲ್ಲಿ ಇನ್ನೇನು ಕೆಲವೇ ಹೊತ್ತಿನಲ್ಲಿ ವರ ವಧು ಇಬ್ಬರು ಹೊಸ ಜೀವನ ಆರಂಭಿಸಬೇಕಾಗಿತ್ತು. ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದ್ರೆ ಅಷ್ಟರಲ್ಲೇ ವರನಿಗೆ ವಧುವಿನ ಬಗ್ಗೆ ಶಾಕಿಂಗ್ ವಿಚಾರ ಗೊತ್ತಾಗಿ ನಿಂತಲೇ ಬರ ಸಿಡಿಲು ಬಡಿದಂತಾಗಿತ್ತು. ಮದುವೆ ಮುರಿದಿಬಿದ್ದಿತ್ತು. ಸಂಭ್ರಮದ ಮನೆಯಲ್ಲಿ ಗಲಾಟೆ ಗದ್ದಲಗಳು ಕೇಳತೊಡಗಗಿದ್ದವು. ಕೊನೆ ಕ್ಷಣದಲ್ಲಿ ಮದುವೆ ಮುರಿದುಬಿದ್ದಿದೆ.
ಅಷ್ಟಕ್ಕೂ ಆಗಿದ್ದೇನು..?
ನವದೆಹಲಿಯ ಲೋನಿ ಕಾಲೊನಿಯಲ್ಲಿ ಮದುವೆ ಕಾರ್ಯಕ್ರಮವೊಂದು ಭರ್ಜರಿಯಾಗಿ ನಡೆದಿತ್ತು. ಇನ್ನೇನು ವಧುವಿನ ಕುತ್ತಿಗೆಗೆ ವರ ತಾಳಿ ಕಟ್ಟುವ ಸಮಯ ಹತ್ತಿರ ಬರುತ್ತಿತ್ತು. ಆದ್ರೆ ಶಾಸ್ತ್ರಗಳೆನ್ನಲ್ಲಾ ಮುಗಿಸಿ ಬಿಡುವಿನ ಸಮಯದಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ವರನಿಗೆ ದೊಡ್ಡ ಆಘಾತವೇ ಎದುರಾಗಿತ್ತು.
ನಿಶ್ಚಯಿಸಿದ್ದ ಮದುವೆ ಕ್ಯಾನ್ಸಲ್ :ವಿವಾಹವಾಗ್ಬೇಕಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಯಾಕೆಂದರೆ ಯುವಕನೊಬ್ಬ ವರನ ವಾಟ್ಸಾಪ್ ನಂಬರ್ ಗೆ ವಧುವಿನ ನಗ್ನ ಫೋಟೋಗಳನ್ನ ಕಳುಹಿಸಿದ್ದಾನೆ. ಈ ಫೋಟೋಗಳನ್ನ ನೋಡಿ ಶಾಕ್ ಆದ ವರ ತಕ್ಷಣವೇ ಅದನ್ನು ತನ್ನ ಮನೆಯವರಿಗೆ ತೋರಿಸಿದ್ದಾನೆ. ಬಳಿಕ ಕೋಪಗೊಂಡ ವರನ ಕುಟುಂಬಸ್ಥರು ವಧುವಿನ ಕುಟುಂಬಸ್ಥರನ್ನು ಕರೆದು ಇದರ ಬಗ್ಗೆ ಚರ್ಚಿಸಿ ದೊಡ್ಡ ಗಲಾಟೆಯನ್ನು ಮಾಡಿದ್ದಾರೆ. ಮದುವೆಯೂ ಮುರಿದು ಬಿದ್ದಿದೆ.
ಇನ್ನು ಈ ಎರಡು ಕುಟುಂಬಗಳ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವವರೆಗೂ ಹೋಗಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ವರನ ಕೆಲವೊಂದಷ್ಟು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲ ಸಂಬಂಧಿಕರು ಈ ಬಗ್ಗೆ ಹಲವು ವದಂತಿಗಳನ್ನ ಹಬ್ಬಿಸಿದ್ದಾರೆ. ಅದೇನೆಂದ್ರೆ ವಧುವಿಗೆ ಈ ಹಿಂದೆಯೇ ಒಬ್ಬ ಬಾಯ್ ಫ್ರೆಂಡ್ ಇದ್ದು ಆತನೇ ಈ ಕೆಲಸ ಮಾಡಿರಬೇಕೆಂದು ಮಾತನಾಡಿಕೊಂಡಿದ್ದಾರೆ. ಸದ್ಯ ಸತ್ಯಾಸತ್ಯತೆ ಪೊಲೀಸ್ ತನಿಖೆ ಬಳಿಕವಷ್ಟೇ ಗೊತ್ತಾಗಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








