ಜುಲೈ 2021ರಲ್ಲಿ – 1.16 ಲಕ್ಷ ಕೋಟಿ ರೂ. ಜಿಎಸ್ ಟಿ ಸಂಗ್ರಹ..!
ನವದೆಹಲಿ: ಜುಲೈ 2021ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹ 1.16 ಲಕ್ಷ ಕೋಟಿ ರೂ. ಆಗಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ರ‍್ಷ ಇದೇ ತಿಂಗಳು ಸಂಗ್ರಹವಾಗಿದ್ದ ಜಿಎಸ್‌ಟಿ ವರಮಾನಕ್ಕೆ ಹೋಲಿಸದರೆ ಈ ಬಾರಿ ಶೇಕಡ 33 ರಷ್ಟು ಹೆಚ್ಚು ವರಮಾನ ಸಂಗ್ರಹವಾಗಿದೆ. ಈ ಬೆಳವಣಿಗೆಯು ದೇಶದ ರ‍್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ’ ಎಂದು ಸಚಿವಾಲಯ ಹೇಳಿದೆ.
ಸಿಜಿಎಸ್‌ಟಿ 22,197 ಕೋಟಿ ರೂ, ಎಸ್ ಜಿಎಸ್‌ಟಿ 28,541 ಕೋಟಿ ರೂ, ಐಜಿಎಸ್‌ಟಿ 57,864 ಕೋಟಿ ರೂ. ಸಂಗ್ರಹವಾಗಿದೆ. 2021ರ ಜುಲೈ 1ರಿಂದ 5ರವರೆಗೆ ಜಿಎಸ್‌ಟಿ ರಿರ‍್ನ್ 4,937 ಕೋಟಿ ರೂ, ಸಂಗ್ರಹವಾಗಿದೆ ಇದರಲ್ಲಿ ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಅದರಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರೂ ಸಹ ಬಡ್ಡಿ ಮನ್ನಾ, ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ತೆರಿಗೆಪಾವತಿದಾರರಿಗೆ ಪ್ರಕಟಿಸಲಾಗಿತ್ತು.
ಜುಲೈ,2020ರಲ್ಲಿ 87,422 ಕೋಟಿ ರೂ. ಜಿಎಸ್‌ಟಿ ವರಮಾನ ಸಂಗ್ರಹವಾಗಿತ್ತು. ಈ ರ‍್ಷ ಜೂನ್ ತಿಂಗಳಲ್ಲಿ 92,849 ಕೋಟಿ ರೂ. ಜಿಎಸ್‌ಟಿ ಮಾಸಿಕ ವರಮಾನ ಸಂಗ್ರಹವಾದರೆ, ಜುಲೈ ತಿಂಗಳಲ್ಲಿ 1,16,393 ರೂ. ಜಿಎಸ್‌ಟಿ ವರಮಾನ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ ಮೂಲಕ 22,197 ಕೋಟಿ ರೂ., ರಾಜ್ಯ ಜಿಎಸ್‌ಟಿ ಮೂಲಕ 28,541 ಕೋಟಿ ರೂ., ಸಮಗ್ರ ಜಿಎಸ್‌ಟಿ ಮೂಲಕ 57,864 ಕೋಟಿ ರೂ. ಮತ್ತು ಸೆಸ್ ಮೂಲಕ 7,790 ಕೋಟಿ ರೂ. ಸಂಗ್ರಹ ಆಗಿದೆ.
3ನೇ ಅಲೆಯ ಆತಂಕದ ನಡುವೆ ಮತ್ತೊಂದು ಭೀತಿ – ಶೀಘ್ರದಲ್ಲೇ ಅಪ್ಪಳಿಸಲಿದೆ ಕೋವಿಡ್ ನ ಸಣ್ಣ ಅಲೆ..!
“ಬಿಗ್ ಬಾಸ್ ಗೆ ಬರುತ್ತೇನೆ… ಬೆತ್ತಲೆ ಯೋಗ ಮಾಡ್ತೇನೆ.. ದಿನಕ್ಕೆ 50 ಲಕ್ಷ ಕೊಡ್ತೀರಾ..?” – ಬೆತ್ತಲೆ ಬಾಬಾ ..!








