ಬೆಂಗಳೂರು: GST ಪಾಲು ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ರಾಜ್ಯದ GST ತೆರಿಗೆ ಪಾಲು ನಮ್ಮ ರಾಜ್ಯ ಸರ್ಕಾರದ ಹಕ್ಕು. ಕೇಂದ್ರ ಸರ್ಕಾರ ಕೊಡುವ ಭಿಕ್ಷೆ ಅಲ್ಲ, ನಮ್ಮ ಪಾಲಿನ ಹಣವನ್ನು ನಾವು ಕೇಳಿದರೆ ರಿಸರ್ವ್ ಬ್ಯಾಂಕ್ ಬಳಿ ಸಾಲ ಕೇಳಿ ಅಂತಿದೆ ನರೇಂದ್ರ ಮೋದಿ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಇನ್ನೂ ಕರ್ನಾಟಕದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು ಈಗ ಎಲ್ಲಿದ್ದೀರಿ ? ಅಂಜುಬುರುಕುತನ ಬಿಟ್ಟು ಕನಿಷ್ಠ ಪ್ರಧಾನಿ ಬಳಿ ಮಾತನಾಡಿ, ನಮ್ಮ ಪಾಲಿನ ತೆರಿಗೆ ಹಣ ಕೊಡಿಸಿ ಎಂದು ಆಗ್ರಹಿಸಿದ್ದಾರೆ.








