GT Vs RR : ಆ ತಂಡ ಗೆಲ್ಲಬೇಕು.. ಈ ಸಲ ಕಪ್ ಯಾರದ್ದು.. ಅಖ್ತರ್
ಆಸ್ಟ್ರೇಲಿಯದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಗಾಗಿ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಬೇಕು ಎಂದು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ. ಆದರೆ ಅದೇ ಸಮಯದಲ್ಲಿ.. ಗುಜರಾತ್ ಟೈಟಾನ್ಸ್ ಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ಅಖ್ತರ್ ಹೇಳಿದ್ದಾರೆ.
ಕ್ಯಾಶ್ ರಿಚ್ ಲೀಗ್ IPL-2008 ರ ಮೊದಲ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಶೇನ್ ವಾರ್ನ್, ಚೊಚ್ಚಲ ಸೀಸನ್ ನಲ್ಲಿಯೇ ತಂಡಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟರು. ಅದಾದ ಬಳಿಕ ಕಳೆದ 13 ಸೀಸನ್ ಗಳಲ್ಲಿ ರಾಜಸ್ಥಾನ್ ನೀರಸ ಪ್ರದರ್ಶನ ನೀಡಿತ್ತು. ಈ ಬಾರಿ ತಂಡ ಉತ್ತಮವಾಗಿದ್ದು, ಫೈನಲ್ ಪ್ರವೇಶಿಸಿದೆ.

ಮತ್ತೊಂದೆಡೆ ಐಪಿಎಲ್-2022ರೊಂದಿಗೆ ಮೆಗಾ ಟೂರ್ನಮೆಂಟ್ ಗೆ ಎಂಟ್ರಿ ಕೊಟ್ಟಿರುವ ಗುಜರಾತ್ ಟೈಟಾನ್ಸ್ ಈ ಆವೃತ್ತಿಯಲ್ಲಿ ಸರಣಿ ಗೆಲುವಿನೊಂದಿಗೆ ಫೈನಲ್ ತಲುಪಿದೆ. ಉಭಯ ತಂಡಗಳ ನಡುವಿನ ಅಂತಿಮ ಪಂದ್ಯ ಭಾನುವಾರ (ಮೇ 29) ನಡೆಯಲಿದೆ.
ಈ ನಿಟ್ಟಿನಲ್ಲಿ ಶೋಯೆಬ್ ಅಖ್ತರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ರಾಜಸ್ಥಾನ್ ತಂಡ ಗೆಲ್ಲಬೇಕು ಎಂದು ನಾನು ಮನಸಾರೆ ಕೋರಿಕೊಳ್ಳುತ್ತೇನೆ. ಆದ್ರೆ ಒಬ್ಬ ಕ್ರಿಕೆಟ್ ಆಟಗಾರನಾಗಿ ಹೊಸ ತಂಡ ಕಪ್ ಗೆದ್ದರೇ ಚೆನ್ನಾಗಿರುತ್ತದೆ.
ರಾಜಸ್ಥಾನ್ ಶೇನ್ ವಾರ್ನ್ ನೆನಪಿಗಾಗಿ ಗುಜರಾತ್ ಅನ್ನು ಸೋಲಿಸಿ ಪ್ರಶಸ್ತಿ ಗೆಲ್ಲಬೇಕು. ವಾರ್ನ್ ಗಾಗಿಯಾದ್ರೂ ರಾಜಸ್ಥಾನ ಗೆಲ್ಲಬೇಕೆಂದು ಮನಸ್ಸು ಬಯಸುತ್ತದೆ.
ಆದರೆ, ಮೊದಲೇ ಹೇಳಿದಂತೆ ಹೊಸ ತಂಡ ಗುಜರಾತ್ ಟೂರ್ನಿಯಲ್ಲಿ ಅಬ್ಬರಿಸಿದೆ. ಆದ್ದರಿಂದ ಗುಜರಾತ್ ಗೆಲ್ಲುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಅಖ್ತರ್ ತಿಳಿಸಿದರು.








