ಅಸ್ಥಿರ ಪ್ರದರ್ಶನ ನೀಡಿರುವ ರಾಜಸ್ಥಾನ ರಾಯಲ್ಸ್ ತಂಡ ಇಂದು ತವರಿನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ದೊಡ್ಡ ಹೋರಾಟವನ್ನು ಮಾಡಲಿವೆ. ಎರಡೂ ತಂಡಗಳು ಈ ಪಂದ್ಯಗಳನ್ನು ಸೋತಿದ್ದವು. ಗುಜರಾತ್ ತಂಡಕ್ಕೆ ಅಗ್ರಪಟ್ಟ ಉಳಿಸಿಕೊಳ್ಳಬೇಕಿದ್ದಲ್ಲಿ ಈ ಪಂದ್ಯವನ್ನು ಗೆಲ್ಲಬೇಕಿದೆ.
ಮೊನ್ನೆ ಡೆಲ್ಲಿ ವಿರುದ್ಧ ಸೋತ ಹೊರತಾಗಿಯೂ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೆ ಮುಂದುವರೆದಿದೆ. ರಾಜಸ್ಥಾನ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದೆ.
ನಾಯಕತ್ವ ಚೆನ್ನಾಗಿ ನಿಭಾಯಿಸುತ್ತಿರುವ ಸಂಜು ಸ್ಯಾಮ್ಸನ್ ಗೆಲುವನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಕಳೆದ 6 ಪಂದ್ಯಗಳಲ್ಲಿ ರಾಯಲ್ಸ್ 3 ಪಂದ್ಯಗಳನ್ನು ಸೋತಿದೆ. ಮೊನ್ನೆ ಮುಂಬೈ ವಿರುದ್ಧ 212 ರನ್ ನೀಡಿತ್ತು. ತಂಡದ ಬೌಲಿಂಗ್ ವಿಭಾಗ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ವೇಗಿಗಾಳದ ಟ್ರೆಂಟ್ ಬೌಲ್ಟ್ , ಆಲ್ರೌಂಡರ್ ಜಾಸನ್ ಹೋಲ್ಡರ್ ಸ್ಪಿನ್ನರ್ಗಳಾದ ಯಜ್ವಿಂದರ್ ಚಾಹಲ್ ಹಾಗೂ ಕುಲ್ದೀಪ್ ಯಾದವ್ ದುಬಾರಿ ಬೌಲರ್ ಗಳಾದರು.
ಈ ಋತುವಿನಲ್ಲಿ ಗುಜರಾತ್ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಗೆದ್ದಿರುವುದರಿಂದ ರಾಯಲ್ಸ್ಗೆ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ.
ರಾಯಲ್ಸ್ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು ರನ್ ಹೊಳೆ ಹರಿಸುವ ತಾಕತ್ತು ಹೊಂದಿದೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ರನ್ ಮಳೆ ಸುರಿಸಿದ್ದಾರೆ. ಇವರಿಗೆ ತಾರಾ ಬ್ಯಾಟರ್ ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿಮ್ರಾನ್ ಹೇಟ್ಮಯರ್ ಸಾಥ್ ನೀಡಬೇಕಿದೆ.
ರಾಜಸ್ಥಾನ ಬ್ಯಾಟರ್ಗಳು ಗುಜರಾತ್ ಬೌಲರ್ಗಳಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ವೇಗಿ ಮೊಹ್ಮದ್ ಶಮಿ ಹಾಗೂ ಸ್ಪಿನ್ನರ್ ರಶೀದ್ ಖಾನ್ ಬ್ಯಾಟಿಂಗ್ ವಿಭಾಗವನ್ನು ಧ್ವವಂಸ ಮಾಡುವ ತಾಕತ್ತು ಹೊಂದಿದ್ದಾರೆ. ಪಂದ್ಯ ಗೆದ್ದೆರೆ ರಾಜಸ್ಥಾನ +0.800 ನೆಟ್ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಇನ್ನು ಕಳೆದ ಬಾರಿಯ ಚಾಂಪಿಯನ್ ಗುಜರಾತ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 130 ರನ್ ಚೇಸ್ ಮಾಡಲಾಗದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಅಚ್ಚರಿ ನೀಡಿತು. ಆ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಡೇವಿಡ್ ಮಿಲ್ಲರ್ ವಿಫಲರಾದರು. ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವಲ್ಲಿ ವಿಫಲರಾದರು. ಬೌಲಿಂಗ್ ವಿಭಾಗದಲ್ಲಿ ವೇಗಿ ಶಮಿ ಸುಲಭವಾಗಿ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುತ್ತಿದ್ದಾರೆ. ಸ್ಪಿನ್ನರ್ಗಳಾದ ರಶೀದ್ ಖಾನ್ ಮತ್ತು ನೂರ್ ಅಹಮದ್ ವಿಕೆಟ್ ಬೇಟೆ ಮುಂದುವರೆಸಿದ್ದಾರೆ.