Gujarat : ತೂಗು ಸೇತುವೆ ಸಾವಿನ ಸಂಖ್ಯೆ 140 ಕ್ಕೆ ಏರಿಕೆ…
ಗುಜರಾತ್ ನ ಮೋರ್ಬಿ ಸೇತುವೆ ಅಪಘಾತದಲ್ಲಿ ಸೋಮವಾರ ಬೆಳಗಿನ ಜಾವದವರೆಗೆ ಸಾವಿನ ಸಂಖ್ಯೆ 140 ಕ್ಕೆ ತಲುಪಿದೆ. ಮೃತರಲ್ಲಿ 25 ಮಕ್ಕಳೂ ಸೇರಿದ್ದು, 170 ಜನರನ್ನು ರಕ್ಷಿಸಲಾಗಿದೆ. ಭಾನುವಾರ ಸಂಜೆ 6.30 ಕ್ಕೆ 765 ಅಡಿ ಉದ್ದ ಮತ್ತು ಕೇವಲ 4.5 ಅಡಿ ಅಗಲದ ಕೇಬಲ್ ತೂಗು ಸೇತುವೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ.
143 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನ 6 ತಿಂಗಳ ಕಾಲ ಮುಚ್ಚಲಾಗಿತ್ತು. ಇತ್ತೀಚೆಗೆ ಅದನ್ನ ದುರಸ್ತಿ ಮಾಡಿ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಭಾನುವಾರವಾದ್ದರಿಂದ ಜನಸಂದಣಿ ಹೆಚ್ಚಾಗಿತ್ತು. ಇದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಗಾಯಾಳುಗಳ ಚಿಕಿತ್ಸೆಗಾಗಿ ಮೊರ್ಬಿ ಮತ್ತು ರಾಜ್ಕೋಟ್ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲಾಗಿದೆ. ನಾನು ಮೊದಲ ಬಾರಿಗೆ ಇಷ್ಟು ಸಾವುಗಳನ್ನು ನೋಡಿದ್ದೇನೆ ಎಂದು ಎನ್ಡಿಆರ್ಎಫ್ ಅಧಿಕಾರಿ ಹೇಳಿದ್ದಾರೆ. ನದಿಯ ಕೆಸರು ನೀರಿನಲ್ಲಿ ಜನರನ್ನು ಹುಡುಕಲು ನಮಗೆ ಕಷ್ಟವಾಗುತ್ತಿದೆ. ಸೇತುವೆಯಡಿಯಲ್ಲಿಯೂ ಮೃತದೇಹಗಳು ಸಿಲುಕಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆವಾಡಿಯಾದಲ್ಲಿ ಪ್ರಧಾನಿ ಮೋದಿ ದುರಂತದ ಕುರಿತು ಮಾತನಾಡಿ “ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಎನ್ಡಿಆರ್ಎಫ್, ಸೇನೆ ಮತ್ತು ವಾಯುಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ಬೆಳಗ್ಗೆ ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಚ್ಚು ನದಿಯಲ್ಲಿ ನೀರು ಕಡಿಮೆ ಮಾಡಲು ಚೆಕ್ ಡ್ಯಾಂ ಕೆಡವಲಾಗುತ್ತಿದೆ. ಈ ಪ್ರಕರಣದಲ್ಲಿ ಬ್ರಿಡ್ಜ್ನ ನಿರ್ವಹಣಾ ಕಂಪನಿ ವಿರುದ್ಧ ತಪ್ಪಿತಸ್ಥ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ತನಿಖೆಗೆ ಸಮಿತಿ ರಚಿಸಲಾಗಿದೆ.
ಅಹಮದಾಬಾದ್ನಲ್ಲಿ ಪ್ರಧಾನಿ ಮೋದಿಯವರ ರೋಡ್ಶೋ ರದ್ದು. ಪಿಎಂ ಕೆವಾಡಿಯಾದಿಂದ ಮೊರ್ಬಿಗೆ ಹೋಗಬಹುದು ಎನ್ನಲಾಗಿದೆ.
Gujarat Morbi Cable Bridge Collapse suspension bridge death toll rises to 140