Gujarat CM : ಭೂಪೇಂದ್ರ ಪಟೇಲ್ ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿ…
ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಎರಡನೇ ಭಾರಿಗೆ ಆಯ್ಕೆಯಾಗಿದ್ದಾರೆ. ಪಕ್ಷದ ವೀಕ್ಷಕರು ಮತ್ತು ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಮತ್ತು ಬಿಎಸ್ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕಾಂಗದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಶಾಸಕ ಕಾನು ದೇಸಾಯಿ, ಪಟೇಲ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಪಕ್ಷದ ಇತರ ಶಾಸಕರಾದ ಮನೀಶಾ ಬೆನ್ ವಕೀಲ್, ರಮಣ್ ಪಾಟ್ಕರ್ ಶಂಕರ್ ಚೌಧರಿ ಮತ್ತು ಪೂರ್ಣೇಶ್ ಮೋದಿ ಅವರು ಪ್ರಸ್ತಾವನೆಯನ್ನ ಬೆಂಬಲಿಸಿದರು.
ಭೂಪೇಂದ್ರ ಪಟೇಲ್ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿಯೇ ಇವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಹಾಗಾಗಿ ಈ ಸಭೆ ಕೇವಲ ಔಪಚಾರಿಕವಾಗಿತ್ತು.
Gujarat CM : Bhupendra Patel to be next Chief Minister of Gujarat








