Gujarat Election : ಗುಜರಾತ್ ಗೆಲುವಿನ ಕುರಿತು ಸಿಎಂ ಬೊಮ್ಮಾಯಿ ರಿಯಾಕ್ಷನ್….
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಗುಜರಾತ್ ನ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯು ದಾಖಲೆಯ ವಿಜಯದತ್ತ ಸಾಗುತ್ತಿದೆ. ಪರಿಣಾಮಕಾರಿಯಾದ ಆಡಳಿತ ನೀಡಿದರೆ, ಆಳುವ ಪಕ್ಷಕ್ಕೆ ಆಡಳಿತ ಪರ ಅಲೆ ಚುನಾವಣೆಯಲ್ಲಿ ನೆರವಾಗುತ್ತದೆ ಎಂಬುದರ ಸೂಚನೆ ಇದು.
ಈ ಫಲಿತಾಂಶ , ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ನಾಯಕತ್ವದ ಮೇಲೆ ಮತದಾರರ ಭರವಸೆಯನ್ನು ಸೂಚಿಸುತ್ತದೆ ಮತ್ತು ಕರ್ನಾಟಕ ವಿಧಾನ ಸಭಾ ಚುನಾವಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸುತ್ತಿದೆ. ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಈ ಬಾರಿ ಅತಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಂದು ರಾಜ್ಯವನ್ನು ಸುಶಾಸನವಾಗಿ ಆಡಳಿತ ಮಾಡಿದರೆ ಜನರ ಬೆಂಬಲ ದೊರೆಯಲಿದೆ ಎಂದರು.
7ನೇ ಬಾರಿ ಬಿಜೆಪಿ ಗೆಲ್ಲುತ್ತಿರುವುದು ಸುಲಭದ ಮಾತಲ್ಲ. ಇದಕ್ಕೆ ಸಂಪೂರ್ಣವಾಗಿ ಅಡಿಪಾಯ ಹಾಕಿ, ಮಾರ್ಗದರ್ಶನ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಈ ಗೆಲುವು ದೊರೆತಿದೆ ಎಂದು ತಿಳಿಸಿದರು.
Gujarat Election: CM Bommai’s reaction on Gujarat’s victory…








