Gujarat Election : ದಾಖಲೆಯ 50 K M ರೋಡ್ ಶೋ ನಡೆಸಿದ ಪ್ರಧಾನಿ ಮೋದಿ…
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ 2 ನೇ ಹಂತದ ಮತದಾನ ಪ್ರಚಾರಾರ್ಥ ದಾಖಲೆಯ ರೋಡ್ ಶೋ ನಡೆಸಿದ್ದಾರೆ. ಪುಷ್ಪಾಂಜಲಿ ಯಾತ್ರೆ ಎಂಬ ರೊಡ್ ಶೋನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ನಾಯಕರ ಪ್ರತಿಮೆಗಳಿಗೆ ಪುಷ್ಪಗಳನ್ನ ಸಲ್ಲಿಸಲಾಯಿತು.
ಭಾರತೀಯ ರಾಜಕಾರಣಿಯೊಬ್ಬರು ಈವರೆಗೂ ನಡೆಸಿರುವ ಅತಿ ದೊಡ್ಡ ರೋಡ್ ಶೋ ಇದಾಗಿದ್ದು, ಪ್ರಧಾನಿ ಮೋದಿ ತಮ್ಮ ತವರಿನಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ 16 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಸತತ 7 ನೇ ಬಾರಿಗೆ ಅಧಿಕಾರಕ್ಕೇರಿ ದಾಖಲೆ ನಿರ್ಮಿಸುವ ತವಕದಲ್ಲಿದೆ.
ನರೋಡಾ ಗಾಮ್ ನಿಂದ ಪ್ರಾರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ 50 ಕಿ.ಮೀ ವ್ಯಾಪ್ತಿಯ ರೋಡ್ ಶೋ ಪ್ರಾರಂಭವಾಗಿ, ಗಾಂಧಿನಗರದಲ್ಲಿ ಅಂತ್ಯಗೊಂಡಿತು. ಸತತ 4 ಗಂಟೆಗಳ ಕಾಲ ಈ ರೋಡ್ ಶೋ ನಡೆದಿದೆ. ಈ ಚುನಾವಣೆಯಲ್ಲಿ ಈ ರೋಡ್ ಶೋ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ಪಕ್ಷದ ಬಾವುಟ ಹಿಡಿದು ಸಾವಿರಾರು ಮಂದಿ ಕಾರ್ಯಕರ್ತರು ಈ ದಾರಿಯಲ್ಲಿ ಹೆಜ್ಜೆ ಹಾಕಿದರು. ಬಿಜೆಪಿಯ ಪ್ರಕಾರ ಇದು ಯಾವುದೇ ರಾಜಕಾರಣಿ ನಡೆಸಿದ ಅತಿ ದೊಡ್ಡ ರೋಡ್ ಶೋ ಆಗಿದೆ.
ನವೆಂಬರ್ 27 ರಂದು, ಸೂರತ್ ಮತ್ತು ದಕ್ಷಿಣ ಗುಜರಾತ್ ಮೊದಲ ಹಂತದಲ್ಲಿ ಮತದಾನಕ್ಕೆ ಮೂರು ದಿನಗಳ ಮೊದಲು, 18 ಕಿಲೋಮೀಟರ್ ರೋಡ್‌ಶೋ ನಡೆಸಿದ್ದರು.
Gujarat Election: PM Modi conducted a record 50 KM road show…








