ಇನ್ಮುಂದೆ ತುಂಡು ಬಟ್ಟೆ ಧರಿಸಿದವರಿಗೆ ಶಾಮ್ಲಜಿ ವಿಷ್ಣು ದೇವಸ್ಥಾಕ್ಕೆ ಪ್ರವೇಶವಿಲ್ಲ..!
ಗುಜರಾತ್ : ಗುಜರಾತ್ ನ ಪ್ರಸಿದ್ಧ ಧಾರ್ಮಿಕ ತಾಣವಾದ ಶಾಮ್ಲಜಿ ವಿಷ್ಣು ದೇವಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ತುಂಡು ಬಟ್ಟೆಗಳನ್ನ ಧರಿಸುವ ಭಕ್ತರಿಗೆ ದೇವಾಲಯಕ್ಕೆ ಪ್ರವೇಶವನ್ನ ನಿರ್ಬಂಧಿಸಲಾಗಿದೆ.
ಅಂದ್ಹಾಗೆ ಇತ್ತೀಚೆಗೆ ಮಹಿಳೆಯರು ಧರಿಸುವ ರಿಪ್ಡ್ ಜೀನ್ಸ್ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ನೀಡಿದ ಹೇಳಿಕೆಯ ಬೆನ್ನಲ್ಲೇ ಗುಜರಾತ್ ನಲ್ಲಿ ಇಂತಹದೊಂದು ನಿಯಮ ತರಲಾಗಿರೋದು ಗಮನಿಸಬೇಕಾದ ವಿಚಾರವಾಗಿದೆ.
ಗುಜರಾತ್‌ನ ಅರಾವಳಿಯ ಯಾತ್ರಾ ಕೇಂದ್ರವಾದ ಶಾಮ್ಲಜಿ ವಿಷ್ಣು ದೇವಾಲಯ ಟ್ರಸ್ಟ್, ಚಿಕ್ಕ ಬಟ್ಟೆಗಳನ್ನ ಧರಿಸುವ ಭಕ್ತಾಧಿಗಳಿಗೆ ದೇವಾಲಯ ನಿಷೇಧಿಸಿದೆ. ಅಂತಹ ಬಟ್ಟೆಗಳನ್ನು ಧರಿಸಿ ಬರುವ ಭಕ್ತರನ್ನು ದೇವಾಲಯದ ಹೊರಗೆ ನಿಲ್ಲಿಸಲಾಗುತ್ತದೆ ಎಂದು ಶಾಮ್ಲಜಿ ವಿಷ್ಣು ಮಂದಿರದ ಟ್ರಸ್ಟಿ ಅನಿಲ್ ಪಟೇಲ್ ತಿಳಿಸಿದ್ದಾರೆ.
ಅಂದ್ಹಾಗೆ ಕರ್ನಾಟಕದ ದಕ್ಷಣ ಕನ್ನಡದ ಭಾಗದಲ್ಲಿಯೂ ಅನೇಕ ಐತಿಹಾಸಿಕ ದೇಗುಲಗಳಲ್ಲಿ ಈ ಹಿಂದಿನಿಂದಲೂ ಜೀನ್ಸ್ ಅಥವಾ ತುಂಡುಬಟ್ಟೆಗಳನ್ನ ಧರಿಸುವ ಭಕ್ತಾಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !
ರಾಜ್ಯದಲ್ಲಿ ಲಾಕ್ ಡೌನ್, ಸೆಮಿ ಲಾಕ್ ಡೌನ್ ಬಗ್ಗೆ ಸುಧಾಕರ್ ಸ್ಪಷ್ಟನೆ
ರೈಲಿನಲ್ಲಿ ಸಿಗರೇಟ್ ಸೇದುವ ಮುನ್ನ ಎಚ್ಚರ… ಎಚ್ಚರ…!
ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆಗಳಿಗೆ ಸುರಕ್ಷತಾ ಮಾರ್ಗಸೂಚಿ !








